ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಬ್ಬ ಪರಿಪೂರ್ಣ ನಟ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರು, ‘ಮೈತ್ರಿ ಸರ್ಕಾರ, ಮುಖ್ಯಮಂತ್ರಿ ಇಲ್ಲವೇ ದೇವೇಗೌಡರ ವಿರುದ್ಧ ಯಾರೂ ಮಾತನಾಡಬಾರದೆಂದು ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ಮೈತ್ರಿ ಭಂಗಕ್ಕಾಗಿ ವಿರೋಧಿಗಳು ಹುಟ್ಟುಹಾಕುತ್ತಿರುವ ಜಗಳದ ಗಾಳಿ ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಸಂಸದೆ ಶೋಭಾ ಕರಂದ್ಲಾಜೆ ರಿಟ್ವೀಟ್ ಮಾಡಿದ್ದಾರೆ.
`ರಾಜ್ಯ ಸರಕಾರದ ಪತನಕ್ಕೆ ಬಾಹ್ಯ ಪ್ರಚೋದನೆಯನ್ನು ನೀಡುತ್ತಾ, ಅದೇ ಸಮಯದಲ್ಲಿ ವಿರೋಧ ಪಕ್ಷವನ್ನು ದೂಷಣೆ ಮಾಡುವ ಪ್ರಹಸನವನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಿದ್ದೀರಿ ಸಿದ್ದರಾಮಯ್ಯನವರೇ.. ನೀವೊಬ್ಬ ಪರಿಪೂರ್ಣ ನಟ” ಎಂದು ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.