Tuesday, January 21, 2025
ಸುದ್ದಿ

ಬೊಗಳಿದ ನಾಯಿ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಸುರತ್ಕಲ್: ಸುರತ್ಕಲ್ ಸಮೀಪದ ಕಾನದಲ್ಲಿ ಶರತ್ ಅವರ ಸಾಕು ನಾಯಿ ನೆಮ್ಮದಿ ಕೆಡಿಸುತ್ತಿದೆ. ಅದರ ಬೊಗಳುವಿಕೆಯಿಂದ ವಿದ್ಯಾರ್ಥಿಗಳಿಗೆ ಓದಲಾಗುತ್ತಿಲ್ಲ ಎಂದು ಸ್ಥಳೀಯರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ ಕುತೂಹಲಕಾರಿ ಪ್ರಕರಣ ನಡೆದಿದೆ.

ಶರತ್ ಅವರು ಶ್ವಾನ ಪ್ರೇಮಿಯಾಗಿದ್ದು ಮೂರು ಶ್ವಾನಗಳನ್ನು ಸಾಕಿದ್ದರು. ಅವುಗಳು ಸ್ವಲ್ಪ ಶಬ್ಧವಾದರೂ ಬೊಗಳಿ ಯಜಮಾನನನ್ನು ಎಚ್ಚರಿಸುತ್ತವೆ. ನಿರಂತರ ಅವುಗಳ ಬೊಗಳುವಿಕೆಯಿಂದ ನಮಗೆ ತೊಂದರೆಯಾಗುತ್ತದೆ ಎಂದು ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶರತ್ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಶ್ವಾನವನ್ನು ದೂರ ಬಿಡಿ, ಇಲ್ಲವೆ ಮನೆ ಖಾಲಿ ಮಾಡಿ ಎಂದು ಸೂಚಿಸಿದರು. ಇದಕ್ಕೊಪ್ಪದ ಶರತ್, ಶ್ವಾನಗಳನ್ನು ನಿಯಮದಂತೆ ವೈದ್ಯರಲ್ಲಿ ತೋರಿಸಿ ಕಾಲಕಾಲಕ್ಕೆ ಔಷಧಗಳನ್ನು ನೀಡಿ ಆರೋಗ್ಯವಾಗಿರಿಸಿಕೊಂಡಿದ್ದೇನೆ ಎಂದು ವಾದ ಮಂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು