Tuesday, January 21, 2025
ಸಿನಿಮಾ

ಶರಣ್ ಜೊತೆ ಹೊಸ ಅವತಾರವೆತ್ತಲಿದ್ದಾರೆ ಶ್ರೀನಗರ ಕಿಟ್ಟಿ– ಕಹಳೆ ನ್ಯೂಸ್

ಶರಣ್ ನಾಯಕರಾಗಿರುವ ‘ಅವತಾರ್ ಪುರುಷ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆಯೇ ‘ಅವತಾರ್ ಪುರುಷ’ ಸಿನಿಮಾ ಕುರಿತಾದ ಸುದ್ದಿಯೊಂದು ಹೊರಬಂದಿದೆ. ಅದು ಚಿತ್ರದಲ್ಲಿ ಸ್ಯಾಂಡಲ್‍ವುಡ್‍ನ ನಟರೊಬ್ಬರು ಗೆಸ್ಟ್ ಅಪಿಯರೆನ್ಸ್ ಮಾಡಿರುವುದು.

‘ಅವತಾರ್ ಪುರುಷ’ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಬಿರುದಾಂಕಿತ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕಿಟ್ಟಿ ಈ ಹಿಂದೆ ಸುನಿ ನಿರ್ದೇಶನದ ‘ಬಹುಪರಾಕ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ನಿರ್ದೇಶಕ ಸುನಿ ಹೇಳುವಂತೆ, ಚಿತ್ರದಲ್ಲಿ ಕಿಟ್ಟಿ ಅವರದು ಅತಿಥಿ ಪಾತ್ರ ಎನ್ನುವುದಕ್ಕಿಂತ ಇಡೀ ಚಿತ್ರಕ್ಕೆ ತಿರುವ ಕೊಡುವ ಪ್ರಮುಖ ಪಾತ್ರವಾಗಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದಲ್ಲಿ ಮೊದಲಾರ್ಧದಲ್ಲಿ ಶರಣ್ ಒಂದು ಉದ್ದೇಶಕ್ಕಾಗಿ ನಾನಾ ಅವತಾರವೆತ್ತಿರುತ್ತಾರೆ. ಆ ಉದ್ದೇಶ ಬಂದು ಕಿಟ್ಟಿ ಎಂಬುದನ್ನು ನಾವು ರಿವೀಲ್ ಮಾಡುತ್ತೇವೆ. ಕಿಟ್ಟಿಯವರನ್ನು ಒಂದು ಪಾತ್ರವಾಗಿಯೇ ತೋರಿಸುತ್ತಾ ಹೋಗಿದ್ದು, ಚಿತ್ರದಲ್ಲಿ ಅವರು ಬ್ಲ್ಯಾಕ್ ಮ್ಯಾಜಿಷಿಯನ್ ಆಗಿ ಕಾಣಿಸಿಕೊಳ್ಳುತ್ತಾರೆ. ಸುಮ್ಮನೆ ಏನೋ ಮಾಟ-ಮಂತ್ರ ಮಾಡುವ ಪಾತ್ರವಲ್ಲ. ನೈಜ ಘಟನೆಗಳನ್ನು ಬೆರೆಸಿ ಅವರ ಪಾತ್ರವನ್ನು ಸೃಷ್ಟಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒರಿಸ್ಸಾದ ಬಿಸ್ತಾದಿಂದ ಬಂದಿರುವ ಹಲವು ವಿದ್ಯೆಗಳನ್ನು ಅಳವಡಿಸಿಕೊಂಡಿರುವ ಪಾತ್ರ. ಕಥೆಗೆ ಪೂರ್ಣ ಟ್ವಿಸ್ಟ್ ಹಾಗೂ ಗಂಭೀರತೆ ಬರೋದು ಈ ಪಾತ್ರದಿಂದ. ಇಡೀ ಸಿನಿಮಾದಲ್ಲಿ ಕಿಟ್ಟಿ ಕಪ್ಪು ಬಟ್ಟೆಯಲ್ಲೇ ಕಾಣಿಸಿಕೊಂಡಿದ್ದಾರೆ ಎಂಬುವುದು ನಿರ್ದೇಶಕ ಸುನಿ ಅವರ ಮಾತು.