Tuesday, January 21, 2025
ಸುದ್ದಿ

ಸುಬ್ರಹ್ಮಣ್ಯ ನಾಗಾರಾಧನ ಕ್ಷೇತ್ರದಲ್ಲಿ ಜನಜಂಗುಳಿ– ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಆಷಾಢ ಮಾಸದ ಮೊದಲ ಪಂಚಮಿ ತಿಥಿ ವಿಶೇಷವಾಗಿದ್ದು, ಕರಾವಳಿಯ ನಾಗಾರಾಧನ ಕ್ಷೇತ್ರಗಳಿಗೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ರವಿವಾರ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಕಂಡು ಬಂದರು. ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಶ್ರೀ ದೇವರ ದರ್ಶನ ಪಡೆದು ವಿವಿಧ ಸೇವೆಗಳನ್ನು ಪೂರೈಸಿದರು.

ರವಿವಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 20ರಿಂದ 25 ಸಾವಿರ ಭಕ್ತರು ಭೇಟಿ ನೀಡಿದ್ದು, 1,100 ಆಶ್ಲೇಷಾ ಬಲಿ ಸೇವೆ, 199 ಸರ್ಪ ಸಂಸ್ಕಾರಗಳು, 450 ಶೇಷಸೇವೆಗಳು, 150 ನಾಗಪ್ರತಿಷ್ಠೆ, 98 ತುಲಾಭಾರ ಸೇವೆ ನಡೆದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು