ಕಡೇಶಿವಾಲಯ: ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್( ರಿ.) ಇದರ ವತಿಯಿಂದ ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಉಪಾನ್ಯಾಸಕರಾದ ಡಾ| ಯೋಗೀಶ್ ಕೈರೋಡಿ, ಬಿರುವೆರ್ ಕುಡ್ಲ ಪುತ್ತೂರು ಘಟಕ ಇದರ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ಶೈಲೇಶ್ ಬಿರ್ವ ಅಗತ್ತಾಡಿ ಬರ್ಕೆ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಧರ್ನಪ್ಪ ಪೂಜಾರಿ ಕನ್ನೊಟ್ಟು ಅವರು ವಹಿಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಈ ಸಂದರ್ಭ ಕಳೆದ ಬಾರಿಯ ಮಳೆಗೆ ಹಾನಿಯಾಗಿದ್ದ ಲೀಲಾವತಿ ಬೆದ್ರಿಮಾರು ಎಂಬವರ ಮನೆಯನ್ನು ಟ್ರಸ್ಟ್‍ನ ವತಿಯಿಂದ ಸುಮಾರು 85,000 ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿದ್ದು, ಅದರ ಮೊತ್ತದ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿಗಳಾದ ಶ್ರೀ ನಿತಿನ್ ಪೂಜಾರಿ ಅರ್ಬಿ , ಟ್ರಸ್ಟಿನ ಅಧ್ಯಕ್ಷರಾದ ವಿದ್ಯಾಧರ ಪೂಜಾರಿ, ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ, ಸಲಹಾ ಸಮಿತಿಯ ಅಧ್ಯಕ್ಷರಾದ ಲೋಕನಾಥ್ ಪೂಜಾರಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಕೀರ್ತನ್ ಪೂಜಾರಿ ಇವರು ಉಪಸ್ಥಿತರಿದ್ದರು.