ವನಮಹೋತ್ಸವ ಪ್ರಯುಕ್ತ ಬಂದಾರುವಿನಲ್ಲಿ ಪಾಂಚಜನ್ಯ ಗೆಳೆಯರ ಬಳಗ, SDMC ಬಂದಾರು ಶಾಲೆ ಮತ್ತು ಊರವರ ಸಹಕಾರದೊಂದಿಗೆ ಹಾಗೂ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಬಂದಾರು ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂದಾರು ವಲಯದ ಅರಣ್ಯ ರಕ್ಷಕರಾದ ಜಗದೀಶ್ ಮಾತನಾಡಿ, ಗಿಡಗಳನ್ನು ನೆಟ್ಟರೆ ಸಾಲದು, ಅದನ್ನು ಪೋಷಿಸಿ ಬೆಳೆಸಬೇಕು. ಆಗ ಮಾತ್ರ ಪರಿಸರದ ಸಮತೋಲನ ಕಾದು ಕೊಳ್ಳಲು ಸಾಧ್ಯ ಎಂದು ಹೇಳಿದರು.
ಪರಿಸರ ಸಮತೋಲನ ಕಾಪಾಡುವುದು ಎಲ್ಲರ ಹೊಣೆಯಾಗಿದ್ದು , ಪರಿಸರ ಉತ್ತಮವಾಗಿದ್ದರೆ ಮಾತ್ರ ಮಳೆ, ಬೆಳೆ ಸೇರಿದಂತೆ ಮನುಷ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿವಹಿಸಬೇಕು ಎಂದು ಪಾಂಚಜನ್ಯ ಗೆಳೆಯರ ಬಳಗದ ಅಧ್ಯಕ್ಷರು ಹೇಳಿದರು. ಕಾರ್ಯಕ್ರಮದಲ್ಲಿ ಪಾಂಚಜನ್ಯ ಗೆಳೆಯರ ಬಳಗದ ಸದಸ್ಯರು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಬಂದಾರು, ಇದರ ಅಧ್ಯಕ್ಞರು, ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಹಾಗೂ SDMC ಬಂದಾರು ಶಾಲೆ ಮತ್ತು ಊರವರ ಸಹಕಾರದೊಂದಿಗೆ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.