ಗೂನಡ್ಕ:ಕರ್ನಾಟಕದ ಹಜ್ಜ್ ಸಚಿವರಾದ ಮಾನ್ಯ ಝಮೀರ್ ಅಹ್ಮದ್‍ಖಾನ್‍ರವರು ಕೊಡುಗೆಯಾಗಿ ನೀಡಿದ ಕೋಟಾದಡಿ ಈ ವರ್ಷ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಪೇರಡ್ಕ ಖತೀಬ್, ಅಶ್ರಫ್ ಫೈಝಿ ಸುಂಕದಕಟ್ಟೆ, ಸದರ್ ಮುಅಲ್ಲಿಂ ಝಕರಿಯಾ ದಾರಿಮಿ ಅರ್ಕಾನ, ಹಾಗೂ ಅರಂತೋಡು ಖತೀಬರಾದ ಇಸಾಕ್ ಭಾಖವಿ ಉಸ್ತಾದ್, ಸಯ್ಯದ್ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ಉಸ್ತಾದರವರನ್ನು ಗೂನಡ್ಕ ಶಾಖಾ ವತಿಯಿಂದ ಪೇರಡ್ಕ ಮಸೀದಿ ಸಭಾಂಗಣದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಮಂಗಳೂರು ರಿಸರ್ವ್ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದು, ಇತ್ತೀಚೆಗೆ ಎ.ಎಸ್.ಐ ಆಗಿ ಬಡ್ತಿ ಹೊಂದಿದ ಪೇರಡ್ಕ ಜಾಫರ್ ಸಾದಿಕ್‍ರವರಿಗೆ ಎಸ್.ಕೆ.ಎಸ್.ಎಸ.ಎಫ್ ವತಿಯಿಂದ ಸಯ್ಯದ್ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಙಳ್ ಸನ್ಮಾನಿಸಿದರು.
ಈ ಕೊಡುಗೆಯನ್ನು ನೀಡಿದ ಮಾನ್ಯ ಸಚಿವ ಝಮೀರ್ ಅಹ್ಮದ್‍ಖಾನ್ ಹಾಗೂ ಉಚಿತ ಹಜ್ಜ್ ಯಾತ್ರೆ ಪೇರಡ್ಕದ ಉಸ್ತಾದ್‍ರವರಿಗೆ ಸಿಗಲು ಶ್ರಮಿಸಿದ ಟಿ, ಎಂ, ಶಾಹಿದ್‍ರವರಿಗೆ ತಂಙಳ್ ಅಭಿನಂದಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪೇರಡ್ಕ ಜಮಾಅತ್ ಅಧ್ಯಕ್ಷರಾದ ಟಿ.ಈ.ಆರೀಫ್ ತೆಕ್ಕಿಲ್, ಮಾಜಿ ಅಧ್ಯಕ್ಷರಾದ ಇಬ್ರಾಹಿಂ, ಕರಾವಳಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ.ಶಾಹಿದ್, ಕಾರ್ಯದರ್ಶಿ ಅಶ್ರಫ್ ಗುಂಡಿ, ಪೇರಡ್ಕ ಜಮಾಅತ್ ಕಾರ್ಯದರ್ಶಿ ಪಿ.ಕೆ.ಉಮ್ಮರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್, ರಿಸರ್ವ್ ಪೊಲೀಸ್ ಎ.ಎಸ್.ಐ ಜಾಫರ್ ಸಾದಿಕ್, ದ.ಕ.ಜಿಲ್ಲಾ ವಿಖಾಯ ಉಪಾಧ್ಯಕ್ಷರಾದ ತಾಜುದ್ದೀನ್ ಟರ್ಲಿ, ಅಬ್ದುಲ್ ಕಾದರ್ ಮೊಟ್ಟೆಂಗಾರ್, ಬಾಬಾ ಹಾಜಿ ರಜಾಕ್ ಹಾಜಿ, ಹಕೀಂ ದರ್ಕಸ್, ಜಾವೇದ್ ತೆಕ್ಕಿಲ್, ಝುಬೈರ್ ಪಾಂಡಿ ಉಪಸ್ಥಿತರಿದ್ದರು.