ಸುಳ್ಯ : ಮೂಗಿನಲ್ಲಿ ಬೆಳೆದ ದುರ್ಮಾಂಸದ ಶಸ್ತ್ರ ಚಿಕಿತ್ಸೆಗೆಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಟ್ಟೆ ಮಳಲವಾಡಿ ನಿಶಾಂತ ಎಂಬ ಯುವಕ ಮೃತಪಟ್ಟ ದುರ್ದೈವಿಯಾಗಿದ್ದು ಮೃತನ ಶವವನ್ನು ಪೋಷ್ಟ್ ಮಾರ್ಟಂಗೆ ಮಂಗಳೂರು ಆಸ್ಪತ್ರೆಗೆ ಕೊಂಡೋಯ್ಯಲಾಗಿದೆ.
ಮೃತನ ಮನೆಯವರು ಆಸ್ಪತ್ರೆ ವಿರುದ್ದ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲೂ ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.