Tuesday, January 21, 2025
ರಾಜಕೀಯಸುದ್ದಿ

ಮೈತ್ರಿ ಕೂಟವನ್ನು ಅಪಾಯದಿಂದ ಪಾರು ಮಾಡುತ್ತಾ ಸ್ಪೀಕರ್ ಹೇಳಿಕೆ..? – ಕಹಳೆ ನ್ಯೂಸ್

ಬೆಂಗಳೂರು: ಖುದ್ದು ಭೇಟಿಯಾಗದ ಹೊರತು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಾಗದು ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಸೌಧದಲ್ಲಿ ರಮೇಶ್ ಕುಮಾರ್ ನೀಡಿದ ಹೇಳಿಕೆ ಸದ್ಯ ಮೈತ್ರಿ ಕೂಟ ಅಪಾಯದಿಂದ ಪಾರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ 9 ಮತ್ತು ಜೆಡಿಎಸ್ ಪಕ್ಷದ 3 ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ವತಃ ತನ್ನನ್ನು ಭೇಟಿಯಾಗದ ಹೊರತು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ. ಶಾಸಕರು ತಮ್ಮ ರಾಜೀನಾಮೆಯ ಬಗ್ಗೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿರುವುದಕ್ಕೆ ನಾನು ಹೊಣೆಯಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಯಮಾವಳಿಗಳ ಅನ್ವಯ ಶಾಸಕರು ಖುದ್ದು ಭೇಟಿಯಾಗಿ ರಾಜೀನಾಮೆ ನೀಡಬೇಕು ಎಂದವರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸ್ಪೀಕರ್ ಹೇಳಿಕೆ ಬೀಸೋ ದೊಣ್ಣೆಯಿಂದ ಮೈತ್ರಿ ಕೂಟವನ್ನು ಪಾರು ಮಾಡುತ್ತಾ ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು