Tuesday, January 21, 2025
ಸಿನಿಮಾ

ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ರಾಮ್‍ಚರಣ್ ತೇಜ್; ಫಸ್ರ್ಟ್ ಪೋಸ್ಟ್‍ಗೆ ಲೈಕ್ಸ್ ಎಷ್ಟು ಗೊತ್ತಾ..? – ಕಹಳೆ ನ್ಯೂಸ್

ಕೆಲವು ದಿನಗಳ ಹಿಂದೆಯಷ್ಟೇ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಇನ್ಸ್ಟಾಗ್ರಾಂನಲ್ಲಿ ಪದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಈ ವಿಷಯ ತಿಳಿಯುತ್ತಿದ್ದಂತೆ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಫೊಲೊ ಮಾಡಿದ್ದಾರೆ. ಈಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಹ ಇನ್‍ಸ್ಟಾಗ್ರಾಂಗೆ ಸೇರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ರಾಮ್ ಚರಣ್ ಪದಾರ್ಪಣೆ ಮಾಡಿರುವುದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ. ಮಾತ್ರವಲ್ಲ ರಾಮ್ ಚರಣ್ ಅವರು ತಮ್ಮ ಇನ್‍ಸ್ಟಾಗ್ರಾಂ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಎಸ್‍ಎಸ್ ರಾಜಮೌಳಿ ಅವರೊಂದಿಗೆ ಮುಂಬರುವ ಬಹುನಿರೀಕ್ಷಿತ ಚಲನಚಿತ್ರ ಆರ್‌ಆರ್‌ಆರ್‌ಗಾಗಿ ಕೆಲಸ ಮಾಡುತ್ತಿರುವ ರಾಮ್ ಚರಣ್, ತಮ್ಮ ಮೊದಲ ಇನ್‍ಸ್ಟಾಗ್ರಾಂ ಪೋಸ್ಟ್‍ನಲ್ಲಿ ಸೈಡ್-ಪ್ರೊಫೈಲ್ ಲುಕ್ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ಯಾವುದೇ ಶೀರ್ಷಿಕೆ ನೀಡದಿದ್ದರೂ ಅವರ ಅಭಿಮಾನಿಗಳು ಅವರನ್ನು ಹೊಗಳಿದ್ದಾರೆ. ಅಭಿಮಾನಿಗಳು ಈಗಾಗಲೇ ತಮ್ಮ ಪ್ರೀತಿಯನ್ನು ತೋರಿಸಲು ಪ್ರಾರಂಭಿಸಿದ್ದಾರೆ ಮತ್ತು ರಾಮ್ ಚರಣ್ ಅವರು 39 ಸಾವಿರ ಫಾಲೋವರ್ಸ್ ಹೊಂದಿದ್ದು 1 ಲಕ್ಷ 28 ಸಾವಿರ ಲೈಕ್ಸ್ ದಾಟಿದೆ.