Tuesday, January 21, 2025
ಸುದ್ದಿ

ಹುತಾತ್ಮ ಶರತ್ ಮಡಿವಾಳರ ಸ್ಮಾರಕಕ್ಕೆ ಪುಷ್ಪಾರ್ಚನೆ – ಕಹಳೆ ನ್ಯೂಸ್

ಬಂಟ್ವಾಳ: ಕಳೆದರೆಡು ವರ್ಷಗಳ ಹಿಂದೆ ಹುತಾತ್ಮನಾದ ಶರತ್ ಮಡಿವಾಳ ಇವರ ಬಲಿದಾನದ ಗೌರವಾರ್ಥವಾಗಿ ಅವರ ಸ್ಮಾರಕಕ್ಕೆ ಹುತಾತ್ಮ ಶರತ್ ಅಭಿಮಾನಿ ಬಳಗದ ವತಿಯಿಂದ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸಜೀಪಮೂಡದ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸಜೀಪ ಮುನ್ನೂರಿನ ಶಾಂತಿನಗರ ಸರಕಾರಿ ಪ್ರಾಥಮಿಕ ಶಾಲೆ ಇದರ ವಠಾರದಲ್ಲಿ ಹುತಾತ್ಮ ಶರತ್ ಸವಿ ನೆನೆಪಿಗಾಗಿ ಪುಟಾಣಿ ಮಕ್ಕಳಿಗೆ ಕೊಡೆ ವಿತರಣೆ ಮಾಡುವ ಮೂಲಕ ಹುತಾತ್ಮ ಬಲಿದಾನ ದಿವಸವನ್ನಾಗಿ ಅಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹುತಾತ್ಮನ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಶರತ್ ಅವರ ತಂದೆ ತನಿಯಪ್ಪ ಮಡಿವಾಳ, ಧರ್ಮ ಜಾಗರಣ ಜಿಲ್ಲಾ ಸಂಯೋಜಕ ಸಚಿನ್ ಮೆಲ್ಕಾರ್, ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ನಿರ್ದೇಶಕರಾದ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡದ ಕಾರ್ಯಾಧ್ಯಕ್ಷ ಪದ್ಮನಾಭ ವಿಟ್ಲ, ವಿಶ್ವ ಹಿಂದೂ ಪರಿಷತ್ ನಾಯಕ ಲೋಹಿತ್ ಪಣೋಲಿಬೈಲು, ಚರಣ್ ಗಟ್ಟಿ ಮಾರ್ನಬೈಲು, ವಿಶ್ವನಾಥ ಪೂಜಾರಿ ಮರ್ತಾಜೆ, ಸದಾನಂದ ಸುವರ್ಣ, ಪುರುಷೋತ್ತಮ ಪೂಜಾರಿ ಮಿತ್ತಕಟ್ಟ, ಭಜರಂಗದಳ ಮುಖಂಡ ದೀಪಕ್ ಕೋಟ್ಯಾನ್ ಸಜೀಪ, ರವೀಂದ್ರ ಕಂದೂರು ಹಾಗೂ ಸಹೃದಯಿ ಶರತ್ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮ ಸ್ವಯಂ ಸೇವಕನ ಗೌರವಾರ್ಥವಾಗಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು