Wednesday, January 22, 2025
ಸುದ್ದಿ

ಕರಾವಳಿಯಲ್ಲಿ ಚುರುಕುಗೊಂಡ ಮುಂಗಾರು – ಕಹಳೆ ನ್ಯೂಸ್

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಕೆಲವು ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಇದೀಗ ಚುರುಕುಗೊಂಡಿದೆ. ಕರಾವಳಿಯ ನಾನಾ ಕಡೆಗಳಲ್ಲಿ ಮಂಗಳವಾರ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು – ಉಡುಪಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯಿತು. ಪುತ್ತೂರು, ಉಪ್ಪಿನಂಗಡಿ, ಮಾಣಿ, ನೇರಳಕಟ್ಟೆ, ಸುರತ್ಕಲ್, ಉಳ್ಳಾಲ, ಮುಡಿಪು, ತೆಕ್ಕಟ್ಟೆ, ಕಾಪು, ಮೂಲ್ಕಿ, ಪುಂಜಾಲಕಟ್ಟೆ, ಕಿನ್ನಿಗೋಳಿ, ವೇಣೂರು, ನಾರಾವಿ, ಕಟಪಾಡಿ, ಶಿರ್ವ, ತೆಕ್ಕಟ್ಟೆ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಉಡುಪಿ, ಮಣಿಪಾಲ, ಸಿದ್ಧಾಪುರ, ಹೆಬ್ರಿ, ಕೊಲ್ಲೂರು, ಕೋಟೇಶ್ವರ, ಕೋಟ, ಉಪ್ಪುಂದ, ಮರವಂತೆ, ಬ್ರಹ್ಮಾವರ ಮತ್ತಿತರ ಕಡೆ ಮಳೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾದ ಪರಿಣಾಮ, ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.