Tuesday, January 21, 2025
ಸುದ್ದಿ

ಬಿಲ್ಲವರ ಮಹಾಮಂಡಲದ ವತಿಯಿಂದ ಸಭೆ – ಕಹಳೆ ನ್ಯೂಸ್

ಮುಂಬಯಿಯಲ್ಲಿ ಬಿಲ್ಲವರ ಮಹಾಮಂಡಲದ ವತಿಯಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಇದರ ಸಭೆ ನಡೆಯಿತು. ಇದರ ಮುಂದಾಳತ್ವವನ್ನು ಡಾ. ರಾಜಶೇಖರ್ ಕೋಟ್ಯಾನ್ ವಹಿಸಿದ್ದರು. ಈ ಸಭೆಯಲ್ಲಿ ಮುಂಬಯಿಯ ಎಲ್ಲಾ ಬಿಲ್ಲವ ಸಮಾಜದ ಮುಖಂಡರು ಮತ್ತು ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಜಯಂತ್ ನಡುಬೈಲ್, ಉಪಾಧ್ಯಕ್ಷ-ಪೀತಾಂಬರ ಹೇರಾಜೆ, ಕಾರ್ಯದರ್ಶಿ ರವಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಮತ್ತು ಗೆಜ್ಜೆಗಿರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರಾದ ಶ್ರೀಧರ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬರುವ 2020 ಮಾರ್ಚ್, ಎಪ್ರಿಲ್ ತಿಂಗಳ ಒಳಗೆ ಶ್ರೀ ಕ್ಷೇತ್ರದ ಬ್ರಹ್ಮಕಲಶ ಸೇವೆಯನ್ನು ಮಾಡುತ್ತೇವೆ ಎಂದು ಶಪಥ ಮಾಡಲಾಯಿತು. ಕ್ಷೇತ್ರದ ಸದಸ್ಯತ್ವ ಅಭಿಯಾನಕ್ಕೆ ತಲಾ ರು. 5000 ಕೊಟ್ಟು ಸಹಕರಿಸಬೇಕೆಂದು ಕೋರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು