Monday, January 20, 2025
ಸಿನಿಮಾಸುದ್ದಿ

ನಾಳೆ ‘ಬಂದ ನೋಡು ಪೈಲ್ವಾನ್’ ಹಾಡು ರಿಲೀಸ್ – ಕಹಳೆ ನ್ಯೂಸ್

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನೆಮಾದ ಉತ್ತರ ಭಾರತದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಖರೀದಿ ಮಾಡುತ್ತಿದೆ. ಸಿನಿಮಾದ ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ.

ಜೀ ಸ್ಟುಡಿಯೋಸ್ ಜೊತೆಗೆ ಸಹಭಾಗಿತ್ವ ವಹಿಸಲು ಖುಷಿ ಆಗುತ್ತಿದೆ ಎಂದಿದ್ದಾರೆ. ಕನ್ನಡದಲ್ಲಿ ಕಾರ್ತಿಕ್ ಗೌಡ, ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ ಸಂಸ್ಥೆ ವಿತರಣೆಯ ಹಕ್ಕನ್ನು ತೆಗೆದುಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಲಂನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರ ಆಗಸ್ಟ್ 29ರಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ಇದ್ದು, ನಾಳೆ ಚಿತ್ರದ ಮೊದಲ ಹಾಡಾಗಿ ‘ಬಂದ ನೋಡು ಪೈಲ್ವಾನ್’ ಥೀಮ್ ಸಾಂಗ್ ರಿಲೀಸ್ ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು