Monday, January 20, 2025
ಸುದ್ದಿ

ಫಿಲೋಮಿನಾದಲ್ಲಿ ಐಟಿ ಫೆಸ್ಟ್ ‘ವಿಝನ್ 2019’ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಕೇವಲ ಸಿಲೆಬಸ್‍ಗೆ ಅಂಟಿಕೊಳ್ಳದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವ ಧೋರಣೆಯನ್ನು ಹೊಂದಿದಾಗ ವ್ಯಕ್ತಿತ್ವದ ಸಂಪೂರ್ಣ ವಿಕಸನವಾಗಬಲ್ಲುದು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಅವರು ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಪಿನಾಕಲ್ ಐಟಿ ಕ್ಲಬ್ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಜುಲೈ 9ರಂದು ಏರ್ಪಡಿಸಲಾದ ಇಂಟ್ರ-ಡಿಪಾರ್ಟ್‍ಮೆಂಟಲ್ ಸ್ಪರ್ಧಾ ಕಾರ್ಯಕ್ರಮ ಐಟಿ ಫೆಸ್ಟ್ ‘ವಿಝನ್ 2019’ ಉದ್ಘಾಟಿಸಿ, ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳ ಒಳಿತಿಗೋಸ್ಕರ ಸಂಸ್ಥೆಯು ನಾನಾ ರೀತಿಯ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಮುಂದಿನ ಬದುಕಿನ ದಿಕ್ಕನ್ನು ನಿರ್ಧರಿಸಿಕೊಳ್ಳುವುದು, ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹೇಳಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಐಟಿ ಫೆಸ್ಟ್‍ನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸ್ಪರ್ಧಾ ಸಾಮಥ್ರ್ಯ ಮತ್ತು ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ ಇ- ಆ್ಯಡ್, ಇ-ಪೇಪರ್, ಇ- ಕೊಲಾಜ್, ಇ-ಮೆನೇಜರ್, ಇ-ಕ್ವಿಜ್, ಇ-ಗೇಮ್ಸ್, ಇ-ಡಿಸೈನ್, ಇ-ಕೋಡ್, ಇ-ಬುಲೆಟಿನ್, ಇ-ಮೋಡೆಲ್, ಇ-ಹಂಟ್, ಗ್ರೂಪ್ ಫೋಕ್ ಡಾನ್ಸ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಐಟಿ ಕ್ಲಬ್‍ನ ಸಂಯೋಜಕಿ ರಾಜೇಶ್ವರಿ ಎಮ್ ‘ವಿಝನ್ 2019’ ಕಾರ್ಯಕ್ರಮದ ಪ್ರೊಮೊ ವೀಡಿಯೋ ಬಿಡುಗಡೆಗೊಳಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾ ಮಾತನಾಡಿ, ‘ವಿಝನ್ 2019’ ಇದರಲ್ಲಿ ಹಮ್ಮಿಕೊಳ್ಳಲಾದ 12 ವಿವಿಧ ಸ್ಪರ್ದೆಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಧ ವಿನಯಚಂದ್ರ ಉಪಸ್ಧಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಾರಿಜ ಎಮ್, ಸೌಮ್ಯ, ಕಲಂದರ್ ಶರೀಫ್, ಅನುಶ್ರೀ ಎನ್ ಕೆ ಮತ್ತು ರಮೇಶ್ ಕೆ ಸಹಕÀರಿಸಿದರು.
ಶ್ರೀಮಾ ಮತ್ತು ಬಳಗದವರು ಪ್ರಾರ್ಥಿಸಿದರು. ಐಟಿ ಕ್ಲಬ್ ಅಧ್ಯಕ್ಷ ಅಂತಿಮ ಬಿಸಿಎ ವಿದ್ಯಾರ್ಥಿ ಶೆರ್ಮಾನ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಸ್ವಾಗತಿಸಿ, ಉಪಾಧ್ಯಕ್ಷ ಅಂತಿಮ ಪಿಎಮ್‍ಸಿ ವಿದ್ಯಾರ್ಥಿ ಶರತ್ ಕೆ ವಿ ವಂದಿಸಿದರು. ಅಂತಿಮ ಬಿಸಿಎ ವಿದ್ಯಾರ್ಥಿನಿ ಜಾಗೃತಿ ಕಾರ್ಯಕ್ರಮ ನಿರೂಪಿಸಿದರು.