Monday, January 20, 2025
ಕ್ರೀಡೆಸುದ್ದಿ

ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಗೆ 100 ಮೀ ಓಟದಲ್ಲಿ ಚಿನ್ನದ ಪದಕ – ಕಹಳೆ ನ್ಯೂಸ್

ನಪೋಲಿ; ಭಾರತದ ಓಟಗಾರ್ತಿ ದ್ಯುತಿ ಚಾಂದ್ ಅವರು ಇಟಲಿಯ ನಪೋಲಿಯಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯ ಕ್ರೀಡಾಕೂಟದ 100 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಓಟಗಾರ್ತಿ ಎಂಬ ಮೈಲಿಗಲ್ಲು ಸೃಷ್ಟಿಸಿದರು.

ಪದಕದ ಸುತ್ತಿನಲ್ಲಿ ದ್ಯುತಿ ಚಾಂದ್ ಅವರು 100ಮೀ ಅಂತರವನ್ನು 11.32 ಸೆಕೆಂಡ್‍ಗಳಲ್ಲಿ ಕ್ರಮಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು. ಇದಕ್ಕೂ ಮುನ್ನ ಅವರು 100 ಮೀ ಓಟವನ್ನು 11.24 ಸೆಕೆಂಡ್‍ಗಳನ್ನು ಮುಗಿಸುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದರು. ಸೆಮಿಫೈನಲ್‍ನಲ್ಲಿ 11.41 ಸೆಕೆಂಡ್‍ಗಳನ್ನು ಮುಗಿಸಿ ಫೈನಲ್‍ಗೆ ಅರ್ಹತೆ ಪಡೆದಿದ್ದರು. ಪ್ರಶಸ್ತಿ ಸುತ್ತನ್ನು ಅತ್ಯುತ್ತಮ ಮುಗಿಸುವ ಮೂಲಕ ಚಾಂಪಿಯನ್ ಆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಕ್ತ ಆವೃತ್ತಿಯಲ್ಲಿ ಇದು ಭಾರತಕ್ಕೆ ಮೊದಲ ಚಿನ್ನದ ಪದಕ ಹಾಗು 100 ಮೀ ಓಟದಲ್ಲಿ ಭಾರತದ ಓಟಗಾರ್ತಿ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲ ಬಾರಿ. ಈ ಹಿಂದೆ 100ಮೀ ವಿಭಾಗದ ಫೈನಲ್‍ಗೆ ಯಾರು ಅರ್ಹತೆ ಪಡೆದಿರಲಿಲ್ಲ.
ಪದಕ ಗಳಿಸಿದ ನಂತರ ಮಾತನಾಡಿದ ದ್ಯುತಿ ಈ ಸಾಧನೆ ಬಗೆಗೆ ಹೆಮ್ಮೆ ಎನಿಸುತ್ತದೆ. ನನಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದ ಕೆಇಐಟಿ ವಿವಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಒಡಿಶಾದ ಜನತೆಗೆ ನಾನು ಈ ಪದಕವನ್ನು ಸಮರ್ಪಿಸುತ್ತೇನೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು