Monday, January 20, 2025
ಕ್ರೀಡೆಸುದ್ದಿ

ವಿಶ್ವಕಪ್‍ನಿಂದ ಹೊರಬಿದ್ದ ಟೀಮ್ ಭಾರತ; ಫೈನಲ್ ಗೆ ನ್ಯೂಝಿಲ್ಯಾಂಡ್ ಎಂಟ್ರಿ – ಕಹಳೆ ನ್ಯೂಸ್

ಮ್ಯಾಂಚೆಸ್ಟರ್ : ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್‍ನಿಂದ ಹೊರ ನಡೆದಿದೆ. ಈ ಮೂಲಕ 2019ರ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಕೊಹ್ಲಿ ಪಡೆಯು ಸೆಮಿಫೈನಲ್ ನಲ್ಲಿ ಸೋಲಿನ ರುಚಿ ಅನುಭವಿಸಿತು.

ಜಡೇಜ ಹಾಗೂ ಧೋನಿಯ ಸಾಹಸದಿಂದ ರೋಚಕ ಘಟ್ಟ ತಲುಪಿದ್ದ ಪಂದ್ಯವು ಕೊನೆ ಕ್ಷಣದಲ್ಲಿ ಕೈ ಜಾರಿದ್ದು, ನ್ಯೂಝಿಲ್ಯಾಂಡ್ ಫೈನಲ್ ತಲುಪಿದೆ. ಭಾರತದ ಪರ ಜಡೇಜ(77) ಧೋನಿ (50) ಪಂತ್ ಹಾಗೂ ಪಾಂಡ್ಯ ತಲಾ 32 ರನ್ ಗಳಿಸಿದರು. ಕೊನೆಗೆ 49.3 ಓವರ್ ಗಳಲ್ಲಿ 221 ರನ್ ಗೆ ಆಲೌಟ್ ಆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ನಿಗದಿಯಾಗಿದ್ದ ಸೆಮಿಫೈನಲ್ ಪಂದ್ಯವು ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಪೂರ್ತಿಗೊಳಿಸುವ ಮುಂಚೆಯೇ ಸುರಿದ ಮಳೆಯ ಕಾರಣದಿಂದ ಬುಧವಾರಕ್ಕೆ ಮುಂದೂಡಿಕೆಯಾಗಿತ್ತು. 46.1 ಓವರ್ ನಲ್ಲಿ 211 ಗಳಿಸಿದ್ದ ನ್ಯೂಝಿಲ್ಯಾಂಡ್, ಇಂದು ಬ್ಯಾಟಿಂಗ್ ಪೂರ್ತಿಗೊಳಿಸಿ 8 ವಿಕೆಟ್ ನಷ್ಟಕ್ಕೆ 239 ಗಳಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು