Monday, January 20, 2025
ಸುದ್ದಿ

ಶ್ರೀರಾಮ ಪದವಿ ಕಾಲೇಜಿನಲ್ಲಿ ಹಲಸು ಮೇಳ – ಕಹಳೆ ನ್ಯೂಸ್

ಬಂಟ್ವಾಳ; ಜು.10: ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಪ್ರಯುಕ್ತ ದಿನಾಂಕ 12.07.2019 ಶುಕ್ರವಾರದಂದು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ “ಹಲಸು ಮೇಳ” ನಡೆಯಲಿದೆ. ವಿವಿಧ ಬಗೆಯ ಹಲಸಿನ ಕರಿದ ತಿಂಡಿ-ತಿನಿಸು, ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ, ಹಲಸಿನ ಕಸಿ ಕಟ್ಟುವುದರ ತರಬೇತಿ ಮುಂತಾದವುಗಳು ಹಲಸಿನ ಮೇಳದ ವಿಶೇಷತೆಯಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಆಹ್ವಾನಿತರಾಗಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಹಲಸಿನ ಕಸಿ ಪರಿಣತ ಜಾಕ್ ಅನೀಲ್, ಲೇಖಕ, ಅಡಿಕೆ ಪತ್ರಿಕೆಯ ಸಹ ಸಂಪಾದಕ ನಾ ಕಾರಂತ ಪೆರಾಜೆ, ಹಿರಿಯ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಆಗಮಿಸಲಿದ್ದಾರೆ. ಅಲ್ಲದೇ ಈ ಎಲ್ಲಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಣೆ ಮಾಡಲಿದ್ದು ವಿದ್ಯಾರ್ಥಿಗಳು ಆಯೋಜಿಸುವ ಪ್ರಥಮ ಹಲಸಿನ ಮೇಳ ಇದಾಗಿರುತ್ತದೆ. ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು