Tuesday, January 21, 2025
ರಾಜಕೀಯ

ಕಾಂಗ್ರೆಸ್‍ನ ಎಲ್ಲಾ ಶಾಸಕರೂ ನನ್ನ ಆಪ್ತರು – ಸಿದ್ದರಾಮಯ್ಯ – ಕಹಳೆ ನ್ಯೂಸ್

ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್‍ನ ಎಲ್ಲ 78 ಶಾಸಕರೂ ನನಗೆ ಆಪ್ತರೇ. ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿ ಅಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೆಲವೊಂದು ಶಾಸಕರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಇಟ್ಟುಕೊಂಡು ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಬೀಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರವನ್ನು ತೆರೆಮರೆಯಲ್ಲಿ ಕುಳಿತು ಅಸ್ತಿರಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಯಾರೂ ಸಿದ್ದರಾಮಯ್ಯನವರ ಆಪ್ತರೆಂದು ಹೇಳಲಾಗುತಿತ್ತೋ ಅವರೇ ಇಂದು ರಾಜಿನಾಮೆ ನೀಡಿ ಅತೃಪ್ತ ಶಾಸಕರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಈ ರೀತಿ ಟ್ವಿಟ್‍ನಲ್ಲಿ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು