Tuesday, January 21, 2025
ಸುದ್ದಿ

ಜೆ.ಡಿ.ಎಸ್.ನಿಂದ ಪುತ್ತೂರಿನಲ್ಲಿ ಸಿ.ಎಂ. ಸಿದ್ದರಾಮಯ್ಯನವರಿಗೆ ಕರಿ ಪತಾಕೆ ಪ್ರದರ್ಶನ

 

ಪುತ್ತೂರು : ತಾಲೂಕಿನ ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಹಾಗೂ ಮುಖಂಡರುಗಳಿಂದ ಕರಾವಳಿಯ ಜನರ ಅಸಹಿಷ್ಣತೆ ಹಾಗೂ ಓಟಿಗಾಗಿ ಲಗಾಮಿಲ್ಲದ ನಾಲಿಗೆಗಳಿಂದ ಸಮಾಜವನ್ನು ಕಲುಷಿತಗೊಳಿಸುವುದರ ವಿರುದ್ದ ಮುಖ್ಯಮಂತ್ರಿಯವರ ಮನಸೆಳೆಯಲು ಕರಿ ಪತಾಕೆಯ ಪ್ರದರ್ಶನವನ್ನು ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯಲ್ಲಿ ದಿನಕ್ಕೊಂದು ಇಲ್ಲಸಲ್ಲದ ಸಬೂಬು ನೀಡಿ ಜನರನ್ನು ದಾರಿ ತಪ್ಪಿಸುವುದು ಶವ ರಾಜಕೀಯ, ಸುಳ್ಳು ಪೊಳ್ಳುಗಳನ್ನು ವಿತರಿಸಿ ಕೋಮುಗಲಬೆಗೆ ಹುನ್ನಾರ,ನಿರಪರಾದಿಗಳಮೇಲೆ ಹಲ್ಲೆ ದಾರಿಹೋಕರ ಮೇಲೆ ಕೇಸು,ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಜಿಲ್ಲೆಯು ಅಸ್ತವ್ಯಸ್ತೆಗೊಂಡಿದ್ದು ಇದರಿಂದಾಗಿ ಜನಸಾಮಾನ್ಯರು ಅತೀವ ಸಂಕಷ್ಟಕ್ಕೊಳಗಾಗಿರುತ್ತಾರೆ.ಇದಕ್ಕಾಗಿ ಹಲವು ಬಾರಿ ಮನವಿ ಹಾಗೂ ಪ್ರತಿಭಟನೆಗಳು ನಡೆದಿದ್ದರೂ ಯಾವುದೇ ಫಲ ನೀಡಲಿಲ್ಲ.
ಅದೂ ಅಲ್ಲದೆ ಪೋಲೀಸು ಇಲಾಖೆಯು ಕೂಡಾ ತೀರಾ ಕೈಚೆಲ್ಲಿದಂತಿರುವುದೇ ಅಲ್ಲದೆ ಕರಾವಳಿಯ ಉಸ್ತುವಾರವು ಹಲ್ಲಿಲ್ಲದ ಹಾವಾಗಿದೆ.ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿಯವರು ಈ ಕೂಡಲೇ ಗಮನಹರಿಸಿ ಶಾಂತಿಯ ನೆಲೆಬೀಡಾದ ಕರಾವಳಿಯನ್ನು ರಕ್ತದಾಟದಿಂದ ಮುಕ್ತಿಗೊಳಿಸಲು ರಾಜ್ಯ ಜನತಾದಳ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಅಶ್ರಫ್ ಕಲ್ಲೆಗ,ಐಸಿ ಕೈಲಾಸ್ ಉತ್ತಂ ಶಿರಾಡಿ,ಶಿಹಾಬ್ ಗೋಳಿತ್ತಡಿ ,ಶಾಫಿ ಜಿ ಕೆ,ಅಶ್ರಫ್ ಕೊಟ್ಯಾಡಿ,ಖಲಂದರ್ ಶರೀಫ್,ಅದ್ದು ಪಡೀಲ್,ಅಬ್ದುಲ್ ರಹಿಮಾನ್ ಯುನಿಕ್,ಚಂದ್ರ ಶೇಖರ್ ಅಂಚನ್,ಇಬ್ರಾಹಿಂ ಪರ್ಪುಂಜ,ಹಂಸ ಕಬಕ,ಗಂಗಾದರ್ ನಾೖಕ್ ವಿಟ್ಲ ನಜೀರ್,ಕಿರಣ್ ಗೌಡ ಮುಂಗ್ಲಿಮನೆ,ಪದ್ಮ ಮಣಿ,ಕರೀಂ ಪಳ್ಳತ್ತೂರು,ಶಿವು ಸಲ್ದಾನ,ಆರಿಫ್ ಕಬಕ ಮುಂತಾದವರು ಪ್ರತಿಭಟನೆಯಲ್ಲಿ ಪಾಲುಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response