Tuesday, January 21, 2025
ರಾಜಕೀಯ

ಮೈತ್ರಿ ಸರ್ಕಾರದ ಮುಂದಿನ ನಡೆ ಏನು..? – ಕಹಳೆ ನ್ಯೂಸ್

ಅತೃಪ್ತ ಶಾಸಕರ ಮನವೊಲಿಸಲು ಸಚಿವರಾದ ಡಿ.ಕೆ. ಶಿವಕುಮಾರ್, ಜಿ.ಟಿ. ದೇವೇಗೌಡರ ತಂಡ ನಿನ್ನೆ ಮುಂಬೈಗೆ ತೆರಳಿತ್ತು. ಮುಂಬೈ ಹೋಟೆಲ್ ಮುಂದೆ ಹೈಡ್ರಾಮ ಸೃಷ್ಟಿಯಾಗಿ ಡಿಕೆಶಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಡಿಕೆಶಿ ಬರಿಗೈಯಲ್ಲಿ ಬೆಂಗಳೂರಿಗೆ ವಾಪಾಸಾಗಿದ್ದು, ಮೈತ್ರಿ ನಾಯಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತೃಪ್ತ ಶಾಸಕರ ಭವಿಷ್ಯ ನಿರ್ಧಾರ
ರಾಜ್ಯ ರಾಜಕಾರಣ ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿದ್ದು, ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್- ಜೆಡಿಎಸ್ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ಇಬ್ಬರು ಶಾಸಕರೂ ಸೇರಿದಂತೆ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಸಚಿವರ ಬದಲು ಅತೃಪ್ತರಿಗೆ ಮಂತ್ರಿ ಪದವಿ ನೀಡುವುದಾಗಿ ಮೈತ್ರಿ ನಾಯಕರು ಘೋಷಿಸಿದ್ದಾರೆ. ಆದರೂ ಮುಂಬೈನಲ್ಲಿರುವ ಅತೃಪ್ತ ಶಾಸಕರು ವಾಪಾಸ್ ಬರುವ ಮನಸು ಮಾಡಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ ವಿಧಾನಮಂಡಲ ಅಧಿವೇಶನ ಆರಂಭವಾಗುವುದರಿಂದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಬೆಳವಣಿಗೆಗಳು ನಡೆಯುತ್ತಿದ್ದು, ರಾಜ್ಯ ರಾಜಕೀಯ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ.

ಇಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಎಸ್.ಟಿ. ಸೋಮಶೇಖರ್ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಅವರು ಈಗಾಗಲೆ ನೀಡಿರೋ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಅದನ್ನು ಅಂಗೀಕರಿಸಿರಲಿಲ್ಲ. ಇದೇ ಕಾರಣಕ್ಕೆ ಇಂದು ಮತ್ತೆ ರಾಜೀನಾಮೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈಗಾಗಲೆ ಸ್ಪೀಡ್ ಪೋಸ್ಟ್ ಮೂಲಕ ಅತೃಪ್ತ ಶಾಸಕರು ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ.
ಮುಂದೇನು..?

ಅತೃಪ್ತರ ಜೊತೆ ಸೇರಿಕೊಂಡು ಸರ್ಕಾರ ರಚಿಸಿದರೂ ಹೆಚ್ಚು ದಿನ ಅಧಿಕಾರ ನಡೆಸೋಕೆ ಬಿಜೆಪಿಯವರಿಗೂ ಕಷ್ಟ, ಅಲ್ಲಿಯೂ ಗದ್ದಲ ಗೊಂದಲ ಸೃಷ್ಠಿಯಾಗಲಿದೆ ಎಂದು ನಿನ್ನೆ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ವಿಂಡ್ಸರ್ ಮ್ಯಾನರ್ ಹೊಟೇಲ್ ನಲ್ಲಿ ನಿನ್ನೆ ಪಕ್ಷದ ನಾಯಕರು ಸೇರಿ ಸಭೆ ನಡೆಸಿದ್ದರು. ಸಭೆಯಲ್ಲಿ ಗುಲಾಂ ನಬಿ ಆಜಾದ್, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು. ಸಭೆಯಲ್ಲಿ ಮುಂದೇನು ಅನ್ನುವ ಕುರಿತು ಗಂಭೀರ ಚರ್ಚೆ ಮಾಡಲಾಯಿತು.

ಬಿಜೆಪಿ ಸರ್ಕಾರ ರಚಿಸುತ್ತಿದ್ದಂತೆ ಅವರ ಮಧ್ಯೆಯೇ ಗೊಂದಲ ಸೃಷ್ಠಿಯಾಗುತ್ತದೆ. ಅವರ ಸರ್ಕಾರದ ವಿರುದ್ಧವೇ ಜನ ತಿರುಗಿ ಬೀಳ್ತಾರೆ, ಆಗ ಮಧ್ಯಂತರ ಚುನಾವಣೆ ಬರಲಿದೆ. ಅದನ್ನು ನಾವು ಎದುರಿಸೋಣ, ಮೈತ್ರಿ ಮುಂದುವರಿಕೆ ಬಗ್ಗೆ ಈಗ ಚರ್ಚೆ ಬೇಡ, ಚುನಾವಣೆ ಎದುರಾದ ಮೇಲೆ ತೀರ್ಮಾನಿಸೋಣ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸದ್ಯಕ್ಕೆ ಆ ವಿಚಾರದಲ್ಲಿ ಗಮನಹರಿಸುವುದು ಬೇಡ, ಪಕ್ಷವನ್ನ ಬೂತ್ ಮಟ್ಟದಿಂದಲೇ ಬಲಪಡಿಸೋಣ, ನಿಷ್ಠಾವಂತರಿಗೆ ಕೆಪಿಸಿಸಿಯಲ್ಲಿ ಮನ್ನಣೆ ನೀಡೋಣ, ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕೈಬಿಡೋಣ ಎಂದು ಒಮ್ಮತದ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಯಿತು.