Sunday, November 24, 2024
ಸುದ್ದಿ

ಜನಧನ್  ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರೂ. ಠೇವಣಿ ಸಂಗ್ರಹ – ಕಹಳೆ ನ್ಯೂಸ್

ನವದೆಹಲಿ: ದೇಶದ ಪ್ರತಿ ನಾಗರಿಕರಿಗೂ ಬ್ಯಾಂಕ್‌ ಖಾತೆ ಒದಗಿಸಬೇಕೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್  ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಜನಧನ್‌ ಯೋಜನೆಯಡಿ ತೆರೆಯಲ್ಪಟ್ಟಿದ್ದ 36.06 ಕೋಟಿ ಉಳಿತಾಯ ಖಾತೆಗಳಲ್ಲಿ ಜೂ.6 ರವರೆಗೆ 99,649,84 ರೂ. ಠೇವಣಿ ಇತ್ತು. ಇದೀಗ ಜುಲೈ 3 ರ ಹೊತ್ತಿಗೆ ಠೇವಣಿ ಮೊತ್ತ 1,00,495 ಕೋಟಿ ರೂಪಾಯಿಗೆ ತಲುಪಿದೆ.

2014 ರಲ್ಲಿ ಕೇಂದ್ರ ಸರ್ಕಾರ ದೇಶದ ನಾಗರಿಕರು ಬ್ಯಾಂಕ್‌ ವ್ಯವಸ್ಥೆಯೊಳಗೆ ಬರಬೇಕು. ಬ್ಯಾಂಕ್‌ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಶೂನ್ಯ ಮೊತ್ತದಲ್ಲಿ ಉಳಿತಾಯ ಖಾತೆ ಆರಂಭಿಸಲು ಅನುವು ಮಾಡಿಕೊಟ್ಟಿತ್ತು. ಈ ಯೋಜನೆಯಲ್ಲಿ 28.44 ಕೋಟಿ ಖಾತೆದಾರರಿಗೆ ಓವರ್‌ಡ್ರಾಫ್ಟ್‌ ಮತ್ತು ರುಪೇ ಕಾರ್ಡ್‌ ಸೌಲಭ್ಯ ನೀಡಲಾಗಿದೆ. ಯೋಜನೆ ಯಶಸ್ಸು ಕಂಡ ಪರಿಣಾಮ 2018 ಆಗಸ್ಟ್‌ 28 ರಿಂದ ನಂತರ ಅಪಘಾತ ಜೀವವಿಮೆ ಸೌಲಭ್ಯವನ್ನೂ 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಸಲಾಗಿದೆ. ಅಲ್ಲದೆ ಓವರ್‌ಡ್ರಾಫ್ಟ್‌ ಪ್ರಮಾಣವನ್ನು 5000 ರೂ. ನಿಂದ 10000 ರೂ.ಗೆ ಏರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು