ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಜನತಾ ಪ್ರೌಢ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು.
ಜನಸಂಖ್ಯಾ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವ ದಿನವೇ ವಿಶ್ವ ಜನಸಂಖ್ಯಾ ದಿನ. ಮಾನವ ಜೀವಿಯೂ ಒಂದು ಸಂಪನ್ಮೂಲವೇ. ಆದರೆ ಜನಸಂಖ್ಯೆ ಅತಿಯಾದಾಗ ಅದು ಸಮಸ್ಯೆಯೆನಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಜಯರಾಮ ಪೂಜಾರಿ ನುಡಿದರು.
ಚಿಕ್ಕ ವಯಸ್ಸಿನ ತಾಯಂದಿರಿಗೆ ಮಗುವಿನ ಆರೈಕೆ ಹೇಗೆ ಮಾಡಬೇಕು ಎಂಬ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಇದರಿಂದಾಗಿ ಶಿಶು ಮರಣ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ ಬಾಲ್ಯ ವಿವಾಹವನ್ನು ತಡೆಯಬೇಕಾದದ್ದು ಅವಶ್ಯಕ ಎಂದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ ಆರ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ. ಚೈತ್ರಾ, ಹಿರಿಯ ಆರೋಗ್ಯ ಸಹಾಯಕಿ ಸೂಸಮ್ಮ, ಆರೋಗ್ಯ ಸಹಾಯಕಿ ರಾಧಾ, ಪ್ರವೀಣ್, ಆಶಾ ಕಾರ್ಯಕರ್ತೆ ಶ್ಯಾಮಲಾ ಉಪಸ್ಥಿತರಿದ್ದರು.