Tuesday, January 21, 2025
ಸಿನಿಮಾ

ತಂದೆಯಂತೆ ಬ್ಯಾಂಡ್ಮಿಂಟನ್ ಆಡಲಿದ್ದಾರಾ ದೀಪಿಕಾ ಪಡುಕೋಣೆ – ಕಹಳೆ ನ್ಯೂಸ್

ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಂತಹ ಚಿತ್ರಗಳಿಗೆ ಇದೀಗ ಹೊಸ ಸೇರ್ಪಡೆ ಅತೀ ಕಿರಿಯ ವಯಸ್ಸಿನಲ್ಲಿ ಅತ್ಯುನ್ನತ ಸಾಧನೆಗೈದ ಭಾರತದ ಹೆಮ್ಮೆಯ ಬ್ಯಾಂಡ್ಮಿಂಟನ್ ತಾರೆ, ಪಿ.ವಿ.ಸಿಂಧು ಅವರ ಜೀವನದ ಬಗೆಗಿನ ಚಿತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಚಿತ್ರಕ್ಕೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪಿ.ವಿ.ಸಿಂಧು ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಸಿಂಧು ಆಗಿ ದೀಪಿಕಾ ಪಡುಕೋಣೆ ನಟಿಸಲಿ ಎಂಬುದು ಬಹುಭಾಷಾ ನಟ ಸೋನು ಸೂದ್ ಅವರ ಆಸೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಚಿತ್ರಕಥೆ ಬರೆಯುವ ಕಾರ್ಯ ಪೂರ್ಣಗೊಂಡಿದ್ದು, ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನು ಸೋನು ಸೂದ್ ತಾವು ಚಿತ್ರದಲ್ಲಿ ಗೋಪಿಚಂದ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.