Monday, January 20, 2025
ಸಿನಿಮಾ

ಕನಸುಗಳ ರೆಕ್ಕೆ ಬಿಚ್ಚಿ ಹಾರಲು ತಯಾರಾದ ಗುಬ್ಬಚ್ಚಿ – ಕಹಳೆ ನ್ಯೂಸ್

ಪುತ್ತೂರು: ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಹೆಸರುಗಳಿಸಿರುವ ಗುಬ್ಬಚ್ಚಿ ಚಿತ್ರ ಇಂದು ಮುಹೂರ್ತ ಗೊಂಡು ಸೆಟ್ಟೇರಲು ತಯಾರಾಗಿದೆ. ‘ಗುಬ್ಬಚ್ಚಿ’ ಕನಸುಗಳ ರೆಕ್ಕೆ ಬಿಚ್ಚಿ, ಕನ್ನಡ ಟೆಲಿ ಚಿತ್ರದ ಮುಹೂರ್ತ ಇಂದು ಪುತ್ತೂರಿನ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಶುಭ ಮುಹೂರ್ತಕ್ಕೆ ಯುವವಾಹಿನಿ ಕೇಂದ್ರ ಸಮಿತಿ ಇದರ ಅಧ್ಯಕ್ಷರಾದ ಜಯಂತ್ ನಡುಬೈಲು, ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕರು ಪುತ್ತೂರು ಭರತ್ ಕುಮಾರ್ ಹಾಗೂ ಕನ್ನಡ ಸಿನಿಮಾ ನಿರ್ದೇಶಕರು ಬಿ ನವೀನ್ ಕೃಷ್ಣ ಮತ್ತು ಉದ್ಯಮಿ ಬಡಾವು ಜಯರಾಮ್ ಪೂಜಾರಿ, ಟೆಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಶುಭ ಹಾರೈಸಿದರು
ನಂತರ ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತಡ್ಕ ಇಲ್ಲಿ ಸಭಾ ಕಾರ್ಯಕ್ರಮ ಮತ್ತು ಚಿತ್ರದ ಮೊದಲ ಕ್ಯಾಮರಾ ಚಾಲನೆಯನ್ನು ನೆರವೇರಿಸಲಾಯಿತು. ನಂತರ ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು, ಚಿತ್ರದ ಬಗ್ಗೆ ಶುಭ ನುಡಿಗಳೊಂದಿಗೆ ಹಾರೈಸಿದರು. ಈ ಚಿತ್ರದ ನಿರ್ದೇಶಕ ಸಾಯಿ ದೀಕ್ಷಿತ್ ಪುತ್ತೂರು ಮತ್ತು ಸಹ ನಿರ್ದೇಶಕ ರಂಜು ರೈ ಸುಳ್ಯ ಹಾಗೂ ಛಾಯಾಗ್ರಾಹಕರಾದ ಚಂದು ಸುಳ್ಯ ತಿರುಮಲೇಶ್ವರ ಗೌಡ ಹಾಗೂ ಇತರರ ಸಹಕಾರದೊಂದಿಗೆ ನಿರ್ಮಾಣಗೊಳ್ಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧನುಷ್ ಹೊಸಮನೆ, ದೀಪಕ್ ಅಮೀನ್, ಅನಿಲ್ ರೈ ಪೆರಿಗೇರಿ, ಪ್ರಶಾಂತ್ ಪಲ್ಲತಡ್ಕ, ಪ್ರಜ್ವಲ್ ಎಂ ಎಸ್ ಪಡ್ಪು, ಮನೋಜ್ ಪೂಜಾರಿ, ನಾಯಕ ನಟ ಧೀರಜ್ ಹೆಗ್ಡೆ ಹಾಗೂ ನಟರಾದ ರಜನೀಶ್ ಮತ್ತು ರೂಪಲತಾ ಹಾಗೂ ಸಹ ನಟರೆಲ್ಲ ಉಪಸ್ಥಿತರಿದ್ದರು.