Monday, January 20, 2025
ಸುದ್ದಿ

ಲತಾಮಂಗೇಶ್ಕರ್‌ರಿಂದ ಧೋನಿಗೆ ನಿವೃತ್ತಿ ಘೋಷಣೆ ಮಾಡದಂತೆ ಮನವಿ -ಕಹಳೆ ನ್ಯೂಸ್

ವಿಶ್ವಕಪ್ ಪಯಣವನ್ನು ಟೀಂ ಇಂಡಿಯಾ ಮುಗಿಸುತ್ತಿದ್ದಂತೆ, ಧೋನಿ ನಿವೃತ್ತಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಈ ಮಧ್ಯೆ ಗಾಯಕಿ ಲತಾ ಮಂಗೇಶ್ಕರ್ ಅವರ ಟ್ವಿಟ್ ಎಲ್ಲರ ಗಮನ ಸೆಳೆಯಿತು. ಲತಾ ಮಂಗೇಶ್ಕರ್ ಅವರ ಟ್ವೀಟ್ ಓದಿದ ಮೇಲೆ ಮತ್ತೆ ಅಭಿಮಾನಿಗಳು ಧೋನಿ ಪರ ನಿಲ್ಲುವುದರಲ್ಲಿ ಬೇರೆ ಮಾತಿಲ್ಲ.

ಲತಾಮಂಗೇಶ್ಕರ್ ಅವರು, ಧೋನಿಗೆ ನಿವೃತ್ತಿ ಘೋಷಣೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಆಟದ ಅವಶ್ಯಕತೆ ದೇಶಕ್ಕಿದೆ, ನಿಮ್ಮ ನಿವೃತ್ತಿ ಬಗ್ಗೆ ಸುದ್ದಿ ಹರಿದಾಡುತ್ತಿದೆ, ದಯವಿಟ್ಟು ನಿವೃತ್ತಿ ಘೋಷಣೆ ಮಾಡಬೇಡಿ ಎಂದು ಲತಾ ಮಂಗೇಶ್ಕರ್ ಅವರು ಮನವಿಯನ್ನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲತಾ ಮಂಗೇಶ್ಕರ್ ಅವರ ಟ್ವೀಟ್‍ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಡೀ ದೇಶದ ಜನತೆಯ ಮಾತನ್ನು ನೀವು ಹೇಳಿದ್ದೀರಿ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು