Monday, January 20, 2025
ರಾಜಕೀಯಸುದ್ದಿ

ಮುಂಬೈನಲ್ಲಿ ಡಿಕೆಶಿ ಹೋಟೆಲ್ ಮುಂದೆ ಇದ್ದಾಗ ನಾನು ಹೋಟೆಲ್‍ನಲ್ಲೇ ಇದ್ದೆ – ಬಿಜೆಪಿ ನಾಯಕ ಆರ್.ಅಶೋಕ್ -ಕಹಳೆ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ತಾನು ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್‍ಗಿಂದ ದೊಡ್ಡೋನು ಅಂತ ತೋರಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಹತ್ತಿರ ಒಳ್ಳೆಯವರು ಅನಿಸಿಕೊಳ್ಳಲು ಮುಂಬೈಗೆ ಬಂದು ಹೈಡ್ರಾಮಾ ಮಾಡಿದ್ದಾರೆ ಎಂದು ಡಿಕೆಶಿ ಬಗ್ಗೆ ಅಶೋಕ್ ವ್ಯಂಗ್ಯವಾಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ಮುಂಬೈನ ರೆನೈಸೆನ್ಸ್ ಹೋಟೆಲ್ ಮುಂಭಾಗ ಇದ್ದಾಗ, ನಾನು ಹೋಟೆಲ್ ಒಳಗಡೆಯೇ ಇದ್ದೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಹ ಮುಂಬೈನ ಹೋಟೆಲ್‍ನಲ್ಲಿ ಇದ್ದೆ. ಇಬ್ಬರು ಪಕ್ಷೇತರÀ ಶಾಸಕರು ಅದೇ ಹೋಟೆಲ್‍ನಲ್ಲಿ ತಂಗಿದ್ದರು. ಅವರಲ್ಲಿ ಬಿಜೆಪಿಗೆ ಬೆಂಬಲ ಕೊಡುವಂತೆ ಕೇಳಲು ಹೋಗಿದ್ದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಾನು ಭೇಟಿಯೇ ಮಾಡಿಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡೋದು ಸರಿಯಲ್ಲ. ನಾನೇನು ಮುಂಬೈ ಕಮೀಷನರ್‍ಗೆ ದೂರು ಕೊಡಿ ಎಂದು ಶಾಸಕರಿಗೆ ಹೇಳಿಲ್ಲ. ಹೋಟೆಲ್ ಬಳಿ 144 ಸೆಕ್ಷನ್ ಜಾರಿಯಾಗಿತ್ತು. ಆ ವೇಳೆ ಡಿಕೆಶಿ ಗಲಾಟೆ ಮಾಡಿದ್ದಾರೆ. ಹಾಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಕೆ ಶಿವಕುಮಾರ್, ತಾನು ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್‍ಗಿಂದ ದೊಡ್ಡೋನು ಅಂತ ತೋರಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಹತ್ತಿರ ಒಳ್ಳೆಯವರು ಅನಿಸಿಕೊಳ್ಳಲು ಮುಂಬೈಗೆ ಬಂದು ಹೈಡ್ರಾಮಾ ಮಾಡಿದ್ದಾರೆ. ಅವರು ಬರುವಾಗ ತಮ್ಮ ಜೊತೆಯಲ್ಲಿ ಫೋಟೋಗ್ರಾಫರ್‍ನ ಕರೆದುಕೊಂಡು ಹೋಗಿ ವಿಡಿಯೋ ಮಾಡಿ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ ಎಂದು ಡಿಕೆಶಿ ಬಗ್ಗೆ ಅಶೋಕ್ ವ್ಯಂಗ್ಯವಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು