Monday, January 20, 2025
ರಾಜಕೀಯಸುದ್ದಿ

ಸಮಯ ಕಳೆದರೂ ಕೊನೆಗೂ ಸ್ಪೀಕರ್ ಕಚೇರಿಗೆ ತಲುಪಿದ ಕೈ ತೆನೆ ಅತೃಪ್ತ ಶಾಸಕರು!– ಕಹಳೆ ನ್ಯೂಸ್

ಬೆಂಗಳೂರು: ಸುಪ್ರೀಂ ಆದೇಶದಂತೆ 11 ಅತೃಪ್ತ ಶಾಸಕರು 6 ಗಂಟೆಯೊಳಗೆ ಸ್ಪೀಕರ್ ಕಚೇರಿ ತಲುಪಬೇಕಿತ್ತು. ಆದರೆ ಸಮಯ ಮೀರಿ 6:05ಕ್ಕೆ ಶಾಸಕರು ಓಡೋಡಿಕೊಂಡು ಬಂದು ಸ್ಪೀಕರ್ ಕಚೇರಿಯನ್ನು ತಲುಪಿದರು.

ಮುಂಬೈ ವಿಮಾನ ನಿಲ್ದಾಣದಿಂದ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅತೃಪ್ತ ಶಾಸಕರನ್ನು ಸಿಗ್ನಲ್ ಫ್ರೀ ಮೂಲಕ ರಾಜ್ಯದ ಪೊಲೀಸರು ವಿಧಾನಸೌಧಕ್ಕೆ ತಲುಪಿಸಿದ ಕೆಲಸ ಮಾಡಿದರು. ಇನ್ನು ಸುಪ್ರೀಂ ಕೋರ್ಟ್ 6 ಗಂಟೆಯೊಳಗೆ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಹೋಗಬೇಕು ಎಂದು ಸೂಚಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ವಿಧಾನಸೌಧ ಆವರಣ ಪ್ರವೇಶಿಸಿದ ಅತೃಪ್ತ ಶಾಸಕರ ಪೈಕಿ ಭೈರತಿ ಬಸವರಾಜು ಓಡೋಡಿಕೊಂಡು ಬಂದು ಸ್ಪೀಕರ್ ಕಚೇರಿಗೆ ತಲುಪಿದರು. ನಂತರ ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಬಿಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಹೆಚ್ ವಿಶ್ವನಾಥ್, ಮುನಿರತ್ನ, ಮಹೇಶ್ ಕುಮಟಳ್ಳಿ ಕಚೇರಿಗೆ ತಲುಪಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಅತೃಪ್ತ ಶಾಸಕರು ಹೊಸದಾಗಿ ರಾಜಿನಾಮೆ ಪತ್ರವನ್ನು ಸಲ್ಲಿಸಲು ಸ್ಪೀಕರ್ ರಮೇಶ್ ಕುಮಾರ್ ಅವಕಾಶ ನೀಡಿದ್ದಾರೆ. ರಮೇಶ್ ಕುಮಾರ್ ಅವರು ಸಂಜೆ 7 ಗಂಟೆಗೆ ಸುದ್ದಿಗೋಷ್ಠಿ ಕರೆದಿರುವುದು ಸದ್ಯ ಕುತೂಹಲ ಕೆರಳಿಸಿದೆ.