Monday, January 20, 2025
ಸುದ್ದಿ

ಹಾಲಿ ಶಾಸಕಿ ಶಕುಂತಲಾ ಶೆಟ್ಟಿಯವರೇ ಮುಂದಿನ ಪುತ್ತೂರಿನ ಕಾಂಗ್ರೇಸ್ ಅಭ್ಯರ್ಥಿ – ಸಿ.ಎಂ. ಸಿದ್ಧರಾಮಯ್ಯ

 

ಪುತ್ತೂರು : ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ವಿದ್ಯುಕ್ತವಾಗಿ ಇಂದು ಪುತ್ತೂರಿನಲ್ಲಿ ಕರ್ನಾಟಕದ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಈ ಚುನಾವಣ ಸಾರಥ್ಯವನ್ನು ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಘೋಷಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಜನಪ್ರಿಯ ಶಾಸಕಿ, ಅಪಾರ ಜನಮೆಚ್ಚುಗೆಗೆ ಪಾತ್ರರಾದ ಈಗಿನ ಪುತ್ತೂರಿನ ಶಾಸಕಿ ಶಕುಂತಲ ಟಿ. ಶೆಟ್ಟಿಯವರು ಅಪರಿಮಿತ ಪರಿಶ್ರಮದ ಮೂಲಕ 800ಕೋಟಿಗಿಂತಲೂ ಮಿಕ್ಕಿ ಅನುದಾನ ಈ ಕ್ಷೇತ್ರಕ್ಕೆ ತಂದಿದ್ದಾರೆ. ಮುಂದಿನ ಬಾರಿಯೂ ಅವರನ್ನು ನೀವು ಚುನಾಯಿಸಿ ಕಳುಹಿಸಬೇಕು ಎಂದು ನೆರೆದಿದ್ದ ಬೃಹತ್ ಜನಸ್ತೋಮಕ್ಕೆ ಮನವಿ ಮಾಡಿದರು. ಸೂರ್ಯ ಚಂದ್ರರು ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂದಿನ ಬಾರಿ ಕಾಂಗ್ರೆಸಿನಿಂದ ಶಕುಂತಲ ಟಿ ಶೆಟ್ಟಿ ಚುನಾಯಿತರಾಗುವುದು ಎಂದು ತಿಳಿಸುವ ಮೂಲಕ ಪುತ್ತೂರು ಕಾಂಗ್ರೆಸ್ ನಲ್ಲಿ ವಿಧಾನ ಸಭಾ ಸೀಟ್ ಗಾಗಿ ನಡೆಯುತ್ತಿದ್ದ ಕಚ್ಚಾಟಕ್ಕೆ ಅಂತ್ಯ ಹಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response