Tuesday, January 21, 2025
ಸುದ್ದಿ

ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳನ್ನು ಬೆಳೆಸಿದ ಕಾಣಿಯೂರು ಗ್ರಾಮ ಪಂಚಾಯತ್ – ಕಹಳೆ ನ್ಯೂಸ್

ಕಾಣಿಯೂರು: ಮಾನವ, ಪ್ರಕೃತಿಯ ವಿರುದ್ಧವಾಗಿ ನಡೆದುಕೊಂಡಿದ್ದೇ ಇತ್ತೀಚೆಗೆ ಆಗುತ್ತಿರುವ ಹವಾಮಾನ ವೈಪರಿತ್ಯಕ್ಕೆ ಪ್ರಮುಖ ಕಾರಣ. ಮರಗಳನ್ನು ಕಡಿದು ಕಾಂಕ್ರೀಟ್ ಕಟ್ಟಡ ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿರುವುದು ಮಳೆ ಕಡಿಮೆಯಾಗಲು ಕಾರಣ.

ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನೀರಿಗೆ ಬರ ಉಂಟಾಗಲಿದೆ, ಅಂತರ್ಜಲವೂ ಇಳಿಯಲಿದೆ. ಹಸಿರೀಕರಣಕ್ಕೆ ಒತ್ತು ನೀಡದಿದ್ದರೆ, ಮುಂದಿನ ತಲೆಮಾರು ಇನ್ನಷ್ಟು ತೊಂದರೆ ಅನುಭವಿಸುವುದು ನಿಶ್ಚಿತ. ವಾಯು ಮಾಲಿನ್ಯವೂ ಮಿತಿ ಮೀರುತ್ತದೆ. ಇದನ್ನು ತಡೆಗಟ್ಟಲು ಇರುವ ಏಕೈಕ ಉಪಾಯವೆಂದರೆ ಗಿಡಗಳ ನಾಟಿ ಎಂದರಿತ ಕಾಣಿಯೂರು ಗ್ರಾ.ಪಂ. ಆಡಳಿತ ರಸ್ತೆಯ ಬದಿಯಲ್ಲಿ ಸಾಲು ಗಿಡಗಳನ್ನು ನೆಟ್ಟು ಪೋಷಣೆಗೆ ಮುಂದಾಗಿದೆ. ಕಾಣಿಯೂರು ಗ್ರಾ.ಪಂ, ಚಾರ್ವಾಕ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ಗಿಡಗಳನ್ನು ಬೆಳೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತಮ ಹಾಗೂ ಸ್ವಚ್ಛ ಪರಿಸರ ರೂಪಿಸುವತ್ತ ಪ್ರತಿಯೊಬ್ಬರೂ ಮನಸ್ಸು ಮಾಡಿದಾಗ ಮಾತ್ರ ನಮ್ಮ ಜೀವನ ಶೈಲಿ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾಣಿಯೂರು ಗ್ರಾ.ಪಂ. ವತಿಯಿಂದಲೇ ಪರಿಸರ ಸಂರಕ್ಷಣೆಯ ಕಾರ್ಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯನ್ನು ಆಂದೋಲನದ ರೂಪವಾಗಿ ನಡೆಸಲು ಚಿಂತನೆ ನಡೆದಿದೆ. ಗ್ರಾಮದ ಕೊಳವೆ ಬಾವಿಗಳಿಗೆ ಮಳೆ ನೀರಿಂಗಿಸುವ ಕಾರ್ಯವೂ ನಡೆಯಲಿದೆ ಎಂದು ಕಾಣಿಯೂರು ಗ್ರಾ.ಪಂ. ಸದಸ್ಯ, ಸಾಲು ಗಿಡಗಳ ನಾಟಿಯ ನೇತೃತ್ವ ವಹಿಸಿದ್ದ ಗಣೇಶ್ ಉದನಡ್ಕ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು