Tuesday, January 21, 2025
ಸುದ್ದಿ

ಚುರುಕುಗೊಂಡ ಮಳೆಯಿಂದಾಗಿ ರಸ್ತೆಗೆ ಉರುಳಿದ ಮರ – ಕಹಳೆ ನ್ಯೂಸ್

ಸುರತ್ಕಲ್: ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದರಿಂದ ಸುರತ್ಕಲ್ ಸುತ್ತ ಕೆಲವೊಂದು ಸಮಸ್ಯೆಗಳು ಉಂಟಾಗಿವೆ. ಮುಕ್ಕ ಸಸಿಹಿತ್ಲು ಮುಖ್ಯ ರಸ್ತೆಯಲ್ಲಿ ಮರ ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ತೊಡಕು ಉಂಟಾಯಿತು.
ಸ್ಥಳೀಯ ರಿಕ್ಷಾ ಚಾಲಕ, ಸಾಮಾಜಿಕ ಕಾರ್ಯಕರ್ತ ನಾರಾಯಣ ಕರ್ಕೇರ ನೇತೃತ್ವದಲ್ಲಿ ರಿಕ್ಷಾ ಚಾಲಕರಾದ ಜಗದೀಶ್, ಹನೀಫ್ ಸಹಾಯದಿಂದ ರಸ್ತೆಗೆ ಬಿದ್ದ ಮರವನ್ನು ಕಡಿದು ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮುಕ್ಕ ಜಿಲ್ಲಾ ಬಾಯಿ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಬುಧವಾರ ಭಾರೀ ಮಳೆಗೆ ರಸ್ತೆಯಲ್ಲಿ ನೀರು ನಿಂತು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಯಿತು. ಬೈಕಂಪಾಡಿಯಲ್ಲಿ ಮಳೆಗೆ ಹೆದ್ದಾರಿಯಲ್ಲೇ ಬೃಹತ್ ಹೊಂಡ ಉಂಟಾಗಿದ್ದು, ವೇಗವಾಗಿ ಬಂದ ವಾಹನಗಳು ಹೊಂಡಕ್ಕೆ ಬೀಳುತ್ತಿವೆ. ಪಣಂಬೂರು, ಕೂಳೂರುವರೆಗೆ ಅಲ್ಲಲ್ಲಿ ರಸ್ತೆಯಲ್ಲಿ ಹೊಂಡಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು