Wednesday, January 22, 2025
ಸುದ್ದಿ

ಚಿನ್ನದ ದರ ಬರೋಬ್ಬರಿ 930 ರೂ. ಏರಿಕೆ – ಕಹಳೆ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದ ಪರಿಣಾಮ ಚಿನ್ನದ ದರ ಗುರುವಾರ ಬರೋಬ್ಬರಿ 930 ರೂ. ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 35800 ರೂ. ಆಗಿದೆ. ಮುಂಬೈನಲ್ಲಿ ಆಭರಣ ಚಿನ್ನ 34,629 ರೂ. ಹಾಗೂ ಶುದ್ಧ ಚಿನ್ನದ ದರ 38000 ರೂ. ಆಗಿದೆ. ಬೆಂಗಳೂರಿನಲ್ಲಿ ಇಂದಿನ[ಜು.12] 22 ಕ್ಯಾರೆಟ್, 10 ಗ್ರಾಂ ಚಿನ್ನದ ದರ 32,600 ರೂ. ಆಗಿದೆ. ಇದೇ ವೇಳೆ ಬೆಳ್ಳಿಯ ದರ ಕೂಡ ಪ್ರತಿ ಕೆ.ಜಿ.ಗೆ 300 ರೂ. ಏರಿಕೆಯಾಗಿದ್ದು, 39,200 ರೂ. ತಲುಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಮುಖ್ಯಸ್ಥ ಜೆರೊಮ್‌ ಪೊವೆಲ್‌ ಬಡ್ಡಿದರವನ್ನು ಇಳಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಬಿಕ್ಕಟ್ಟು ಮುಂದುವರೆದಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಕುರಿತ ನಕಾರಾತ್ಮಕ ವರದಿಗಳು ಕೂಡಾ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.