Tuesday, January 21, 2025
ಸುದ್ದಿ

ಬೈಕ್ ಮತ್ತು ಕಾರು ನಡುವೆ ಡಿಕ್ಕಿ : ಬೈಕ್ ಸವಾರ ಸಾವು – ಕಹಳೆ ನ್ಯೂಸ್

ನಡುಗಲ್ಲು : ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತ ಪಟ್ಟ ಘಟನೆ ನಿನ್ನೆ ಸುಬ್ರಹ್ಮಣ್ಯದ ನಡುಗಲ್ಲು ಬಳಿ ನಡೆದಿದೆ. ನಾಲ್ಕೂರು ಗ್ರಾಮದ ಯಶೋಧರ ಚಾರ್ಮಾತ ಮೃತ ಪಟ್ಟ ದುರ್ಧೈವಿ.

ಯಶೋಧರ ಅವರು ಗುತ್ತಿಗಾರಿಗೆ ತನ್ನ ಬೈಕ್‍ನಲ್ಲಿ ತೆರಲಿದ್ದರು. ನಡುಗಲ್ಲು ಸೇತುವೆ ದಾಟಿ ಮುಂದೆ ಹೋಗುವಾಗ ಬೆಳ್ಳಾರೆ ಕಡೆಯಿಂದ ಬಂದ ಕಾರೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಊರವರು ಸೇರಿ ಆಸ್ಪತ್ರೆಗೆ ಸಾಗಿಸುವ ವೇಳೆ ಯಶೋಧರ ಮೃತ ಪಟ್ಟಿದ್ದಾರೆ. ಯಶೋಧರ ಅವರು ಅವಿವಾಹಿತರಾಗಿದ್ದು, ಅವರಿಗೆ 34 ವರ್ಷ ವಯಸ್ಸಾಗಿತ್ತು. ಮೃತರು ತಂದೆ, ತಾಯಿ, ಸಹೋದರ, ಬಂಧುಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು