ತುಳುನಾಡಿನ ಸಾಂಸ್ಕೃತಿಕ ಸಂಕೇತಗಳಲ್ಲಿ ಒಂದು ‘ಯಕ್ಷಗಾನ’. ಈ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪುತ್ತೂರಿನಲ್ಲಿ ಸಮಾನ ಮನಸ್ಕರ ನೂತನ ಯಕ್ಷಗಾನ ಕಲಾ ತಂಡವೊಂದು ಅಸ್ತಿತ್ವಕ್ಕೆ ಬಂದಿದೆ.
‘ಕಲಾ ಸುರಭಿ ಯಕ್ಷಗಾನ ಬಳಗ’ ಪುತ್ತೂರು, ದ.ಕ. ಎಂಬ ಹೆಸರಿನ ಈ ತಂಡವು ಜುಲೈ 5ರಂದು ರಚಿಸಲ್ಪಟ್ಟಿದೆ. ಈ ತಂಡದ ಅಧ್ಯಕ್ಷರಾಗಿ ಚಂದ್ರಶೇಖರ ಸುಳ್ಯಪದವು, ಉಪಾಧ್ಯಕ್ಷರಾಗಿ ಉತ್ತಮ ಪಡ್ಪು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಸುಳ್ಯಪದವು, ಸಂಚಾಲಕರಾಗಿ ಸತೀಶ್ ಇರ್ದೆ, ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಹಾಗೂ ಹತ್ತು ಜನ ಸದಸ್ಯರು, ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.