Tuesday, January 21, 2025
ಸಿನಿಮಾ

‘ಬೆಲ್ಚಪ್ಪ’ನ ಬೈಕ್‍ನಲ್ಲಿ ಭಜರಂಗಿ ಮತ್ತು ಭಗವಧ್ವಜ..!! – ಕಹಳೆ ನ್ಯೂಸ್

ತುಳು ಚಿತ್ರರಂಗದಲ್ಲಿ ಈ ವರ್ಷ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ರಜನೀಶ್ ದೇವಾಡಿಗ ನಿರ್ದೇಶನದ ‘ಬೆಲ್ಚಪ್ಪ’ ಸಿನೆಮಾ ಕೂಡಾ ಒಂದು.

ಈ ಸಿನೆಮಾದ ನಿರೀಕ್ಷೆಗೆ ಮುಖ್ಯ ಕಾರಣ, ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬುತ್ತಿರುವುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್. ಅರವಿಂದ ಬೋಳಾರ್ ಮುಖ್ಯ ಪಾತ್ರಧಾರಿಯಾಗಿದ್ದರೂ, ಚಿತ್ರದ ನಾಯಕ ನಟರಾಗಿರುವುದು ಈ ಚಿತ್ರದ ನಿರ್ದೇಶಕರಾದ ರಜನೀಶ್ ದೇವಾಡಿಗ ಅವರೇ. ಇವರಿಗೆ ನಾಯಕಿಯಾಗಿ ನಟಿಸಿರುವುದು ಮುಂಬೈ ಮೂಲದ ಬೆಡಗಿ ಯಶಸ್ವಿ ದೇವಾಡಿಗ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ‘ಬೆಲ್ಚಪ್ಪ’ ಚಿತ್ರತಂಡ ಎರಡು ಹೊಸ ಪೋಸ್ಟರ್‍ ನೊಂದಿಗೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಇದರಲ್ಲಿರುವ ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ. ಚಿತ್ರದ ಹೀರೋ ಹೋರೋಯಿನ್‍ನೊಂದಿಗೆ, ತನ್ನ ಬೈಕ್ ಮುಂದೆ ನಿಂತು ಫೋಸ್ ಕೊಡುತ್ತಿರುವ ಪೋಸ್ಟರನ್ನು ಗಮನಿಸಿದರೆ, ಬೈಕ್‍ನಲ್ಲಿ ಭಜರಂಗಿಯ ಸ್ಟಿಕ್ಕರ್ ಮತ್ತು ಬೈಕ್ ಎದುರುಗಡೆ ಭಗವಧ್ವಜವನ್ನು ಹಾಕಲಾಗಿದೆ.

ಇದನ್ನು ಗಮನಿಸಿದರೆ ರಜನೀಶ್ ಈ ಚಿತ್ರದಲ್ಲಿ ಹಿಂದುತ್ವದಲ್ಲಿ ಆಸಕ್ತಿಯುಳ್ಳ ಯುವಕನಾಗಿ ಕಾಣಿಸಿಕೊಳ್ಳುತ್ತರೋ ಅಥವಾ ಬೈಕ್ ಆಕರ್ಷಕವಾಗಿ ಕಾಣಿಸಲು ಇವುಗಳನ್ನು ಅಳವಡಿಸಿರುತ್ತಾರೋ ಎಂಬ ಸಂದೇಹ ಸಿನಿರಸಿಕರಲ್ಲಿ ಮೂಡಿದೆ.
ಅದೇನೆ ಇರಲಿ ಒಂದು ದೊಡ್ಡ ಗ್ಯಾಪ್‍ನ ನಂತರ ಕೋಸ್ಟಲ್‍ವುಡ್‍ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ‘ಬೆಲ್ಚಪ್ಪ’. ಆಗಸ್ಟ್ 9ಕ್ಕೆ ತುಳುನಾಡಿನಾದ್ಯಂತ ರಿಲೀಸ್ ಆಗಲಿರುವ ‘ಬೆಲ್ಚಪ್ಪ’ನನ್ನು ನೋಡಲು ನೀವು ರೆಡಿಯಾಗಿ.