ಮಂಗಳೂರು; ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಮೂವರನ್ನು ಪೊಲೀಸ್ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಒಬ್ಬನನ್ನು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರಲ್ಲಿ ನಿಶಾಂತ್ ಎಂಬಾತನನ್ನು ಬಂಧಿಸಿದ್ದು ಆರೋಪಿಯಿಂದ 70 ಸಾವಿರ ನಗದು ಹಾಗೂ ಮೊಬೈಲ್ ಫೋನ್‍ನ್ನು ವಶಕ್ಕೆ ಪಡೆಯಲಾಗಿದೆ.
ಉಳ್ಳಾಲ ಪೊಲೀಸರು ಸಂತೋಷ್ ಕುಮಾರ್ ಹಾಗೂ ಜೀವನ್ ಕುಮಾರನ್ನು ಬಂಧಿಸಿದ್ದು, ಇವರಿಂದ 70 ಸಾವಿರ ರೂ ನಗದು, 5 ಮೊಬೈಲ್ ಫೋನ್ ಮತ್ತು ಹ್ಯೂಂಡೈ ಕ್ರೇಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ.