Tuesday, January 21, 2025
ಸಿನಿಮಾ

ಕುತೂಹಲ ಕೆರಳಿಸುತ್ತಿದೆ ‘ಭಜರಂಗಿ 2’ ಮೊದಲ ನೋಟ – ಕಹಳೆ ನ್ಯೂಸ್

ಇಂದು ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ, ಹ್ಯಾಟ್ರಿಕ್ ಹೀರೋ ಬಿರುದಾಂಕಿತ ಡಾ.ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಹೀರೋಗಳ ಹುಟ್ಟುಹಬ್ಬಕ್ಕೆ ಹೊಸ ಚಿತ್ರಗಳ ಗಿಫ್ಟ್ ಗಳು ಬರುವುದು ಸಾಮಾನ್ಯ. ಅದರಂತೆ ಶಿವರಾಜ್‍ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ‘ಭಜರಂಗಿ 2’ ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದು. ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ನೋಟವನ್ನು ಗಮನಿಸುತ್ತಿದ್ದರೆ, ಶಿವಣ್ಣ ಆಧುನಿಕ ಬೇಟೆಗಾರನಂತೆ ಕಾಣಿಸುತ್ತಿದ್ದಾರೆ. ಅವರ ಹಿಂದೆ ಹಲವಾರು ಕಾಡು ಜನಾಂಗಕ್ಕೆ ಸೇರಿದವವರು ರಣೋತ್ಸಾಹದಿಂದ, ಯಾರನ್ನೋ ಅಟ್ಟಿಸಿಕೊಂಡು ಬರುತ್ತಿರುವಂತೆ ಕಾಣಿಸುತ್ತಿದೆ. ಅದು ಶಿವರಾಜ್‍ಕುಮಾರನ್ನ ಅಥವಾ ಬೇರೆ ಯಾರನ್ನು ಎಂಬುದು ಸಸ್ಪೆನ್ಸ್.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಜೊತೆಗೆ ಶಿವರಾಜ್‍ಕುಮಾರ್ ಮತ್ತು ರಚಿತಾರಾಮ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಆಯುಷ್ಮಾನ್ ಭವ’ ಎಂದು ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಈ ಮೊದಲು ಈ ಚಿತ್ರಕ್ಕೆ ಆನಂದ್ ಎಂದು ಟೈಟಲ್ ಇಡಲಾಗಿತ್ತು.