Tuesday, January 21, 2025
ಸುದ್ದಿ

ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟದ ಆರೋಪಿ ಬಂಧನ – ಕಹಳೆ ನ್ಯೂಸ್

ಮಂಗಳೂರು: ಜುಲೈ 08ರಂದು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ ಆರ್. ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿ ತೋಡಾರ್ ನಿವಾಸಿ ಬಶೀರ್‍ ನನ್ನು ಬಂಧಿಸಿದ್ದಾರೆ. ಹಲವಾರು ದನಕಳ್ಳತನ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಬಶೀರ್ ಯಾನೆ ಆರ್ಗಾ ಬಶೀರ್ ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ವಿಶೇಷ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ದನಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ ಮೂಡುಬಿದ್ರೆ ಸಮೀಪದ ನಿವಾಸಿ ಬಶೀರ್ ಯಾನೆ ಆರ್ಗಾ ಬಶೀರ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಸಹಚರರು ದಸ್ತಿಗಿರಿಯಾದರೂ ಘಟನೆಯ ಬಳಿಕ ತಲೆ ಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ಪಡೆದು ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡು ತಿರುಗುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಉಜಿರೆ-ಚಾರ್ಮಾಡಿ ಮಾರ್ಗವಾಗಿ ದನಗಳನ್ನು ಕಳ್ಳತನ ಮಾಡಿ ಸಾಗಿಸ್ತುತ್ತಿದ್ದಾಗ ವಾಹನ ಪಲ್ಟಿಯಾಗಿ, ವಾಹನದಲ್ಲಿದ್ದ ದನಗಳೆಲ್ಲ ಸಾವನ್ನಪ್ಪಿದ್ದವು. ಈ ವಾಹನವನ್ನು ಕೂಡ ಇದೇ ಬಶೀರ್ ಚಾಲನೆ ಮಾಡುತ್ತಿದ್ದ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು ಅಲ್ಲದೆ, ಸುರತ್ಕಲ್ ಕೃಷ್ಣಾಪುರ ನೈತಂಗಡಿ ಬಳಿಯಲ್ಲಿ ಗೀತಾ ಎಂಬವರ ಮನೆಯಿಂದ ದನ ಕಳ್ಳತನ ಮಾಡಿದ ಆರೋಪಿಗಳ ಪೈಕಿ ಈತನೇ ಪ್ರಮುಖನಾಗಿದ್ದ. ಈತನ ವಿರುದ್ಧ ವಿವಧ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಪ್ರಕರಣ ದಾಖಲಾಗಿ, ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡು ತಿರುಗುತ್ತಿದ್ದ ಎಂದು ಮಾಹಿತಿಯಿದ್ದು, ಇವತ್ತು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ ಆರ್. ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಆತನನ್ನು ಮೂಡುಬಿದ್ರೆಯ ತೋಡಾರ್ ಬಳಿ ಮೂಡುಬಿದ್ರೆ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.