Recent Posts

Tuesday, January 21, 2025
ಸುದ್ದಿ

ಮಣಿಕರ್ಣಿಕಾ ಮಾತುಗಾರರ ವೇದಿಕೆ ಕಾರ್ಯಕ್ರಮ:ಹರಟೆ ವಿಷಯ ಅರ್ಥಗರ್ಭಿತವಾಗಿರಲಿ: ರವಿಕಲಾ – ಕಹಳೆ ನ್ಯೂಸ್

ಪುತ್ತೂರು: ಮಾತುಗಾರಿಕೆ ಎಂಬುದು ಒಂದು ಕಲೆ. ಈ ಕಲೆಯ ಮುಂದುವರಿದ ಭಾಗವೇ ಹರಟೆ. ಆದರೆ ಹರಟೆ ಎಂದರೆ ಕೇವಲ ಹಾಸ್ಯವಲ್ಲ. ಬದಲಾಗಿ ಅಲ್ಲಿ ಒಂದು ವಿಷಯದ ಕುರಿತು ಅರ್ಥಗರ್ಭಿತವಾದ ಚರ್ಚೆಯ ಮುಖಾಂತರ ವಿಮರ್ಶಿಸುವುದೇ ಹರಟೆ. ವಿಷಯ ರಹಿತವಾಗಿ ಮಾತನಾಡುವುದು ಹರಟೆಯಾಗುವುದಿಲ್ಲ. ಹರಟೆಯ ಮುಖೇನ ವಿಷಯದ ಕುರಿತ ಜ್ಞಾನವನ್ನು ವ್ಯಕ್ತಿಗೆ ಅಥವಾ ಸಮಾಜಕ್ಕೆ ನೀಡಿದಂತಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ಪದವಿ ವಿಭಾಗದ ಉಪನ್ಯಾಸಕಿ ರವಿಕಲಾ ಅಭಿಪ್ರಾಯಪಟ್ಟರು.

ಅವರು ಜು.11ರಂದು ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ “ಮಣಿಕರ್ಣಿಕಾ” ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ವಿಷಯದ ಕುರಿತು ಮಾತನಾಡಿದರು.
ಹರಟೆಯಲ್ಲಿ ಒಂದು ವಿಷಯದ ಕುರಿತು ನಗೆ ಚಟಾಕಿಯ ಮೂಲಕ ವಿಮರ್ಶೆ ನಡೆಸುವುದು. ಇದರಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಎಂಬುದಾಗಿ ಹರಟೆಯನ್ನು ವಿಂಗಡಿಸಬಹುದು. ವಿದ್ಯಾರ್ಥಿಗಳು ಮಾಡುವ ಚರ್ಚೆಗಳು ಸಾಮಾನ್ಯವಾಗಿ ಅನೌಪಚಾರಿಕವಾಗಿರುತ್ತದೆ. ಅದೇ ರೀತಿ ಮೊಬೈಲ್ ಮುಖೇನ ಇಂದು ವ್ಯಾಟ್ಸಪ್ ಮೂಲಕ ಮಾತನಾಡುವುದೂ ಒಂದು ರೀತಿಯ ಹರಟೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ದೊರೆತಿರುವ ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅಲ್ಲದೆ ವ್ಯಕ್ತಿತ್ವ ವಿಕಸನ ಆಗುವ ದೃಷ್ಟಿಯಿಂದ ಇದು ಸಹಕಾರಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತೃತೀಯ ಬಿಎ ವಿದ್ಯಾರ್ಥಿ ರಾಮಕಿಶನ್ ಕೆ.ವಿ. ವಾರದ ಮಾತುಗಾರ ಬಹುಮಾನ ಪಡೆದರು. ತೃತೀಯ ಬಿಎ ವಿದ್ಯಾರ್ಥಿಗಳು ವಾರದ ಮಾತುಗಾರರ ತಂಡ ಎಂಬ ಬಹುಮಾನ ಪಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪದವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ, ವೇದಿಕೆಯ ಕಾರ್ಯದರ್ಶಿ ತೇಜಶ್ರೀ ವೆಂಕಟೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಾ ವಂದಿಸಿದರು. ಕಾರ್ಯಕ್ರಮವನ್ನು ಜಯಶ್ರೀ ಎ. ನಿರೂಪಿಸಿದರು.