ಸುಬ್ರಹ್ಮಣ್ಯ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಇದರ ವತಿಯಿಂದ ಶ್ರೀ ಶಾರದಾ ಮಹಿಳಾ ಮಹಾವಿದ್ಯಾಲಯ ಸುಳ್ಯ ಇದರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಜು.16ರಂದು ಸುಳ್ಯ ಜ್ಯೋತಿ ಸರ್ಕಲ್ ಬಳಿಯ ಅಮೃತಭವನದಲ್ಲಿ ನಡೆಯಲಿದೆ ಎಂದು ಘಟಕದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭೀಮಗುಳಿ ತಿಳಿಸಿದ್ದಾರೆ.
ವಾರ್ತಾಧಿಕಾರಿ ಖಾದರ್ ಷಾ ಕಾರ್ಯಕ್ರಮ ಉದ್ಘಾಟಿಸುವರು. ಮಡಿಕೇರಿ ಶಕ್ತಿ ದಿನ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಉಪನ್ಯಾಸ ನೀಡುವರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶರೀಪ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕ.ರ.ಸಾ.ಸಂಸ್ಥೆ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಅಶ್ರಪ್ ಕೆ.ಎಂ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ತಹಸಿಲ್ದಾರ್ ಕುಂಞ ಅಹಮ್ಮದ್, ಸುಳ್ಯ ವೃತ್ತ ನಿರೀಕ್ಷ ಸತೀಶ್ ಕುಮಾರ್.ದ.ಕ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಪ್ರೆಸ್‍ಕ್ಲಬ್ ಅಧ್ಯಕ್ಷ ಜೆ.ಕೆ ರೈ ಭಾಗವಹಿಸಲಿರುವರು. ಸುದ್ದಿ ಸಮೂಹ ಸಂಸ್ಥೆಗಳ ಸಂಪಾದ ಡಾ. ಯು.ಪಿ ಶಿವಾನಂದ ಸನ್ಮಾನಿತರಿಗೆ ಸಮ್ಮಾನ ನೆರವೇರಿಸುವರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಭಿನಂದನಾ ಮಾತುಗಳನ್ನಾಡುವರು ಎಂದು ಅವರು ತಿಳಿಸಿದರು.
ಏಳು ಮಂದಿಗೆ ಸನ್ಮಾನ
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹಿಮಕರ ಕೆ,ಎಸ್, ರೆಡ್‍ಕ್ರಾಸ್ ಪುರಸ್ಕೃತ ದಾನಿ ಪಿ.ಬಿ ಸುಧಾಕರ ರೈ, ಪತ್ರಕರ್ತ ರವಿರಾಜ ವಳಲಂಬೆ, ರೇಡಿಯೋ ಜಾಕಿ ತ್ರಿಶೂಲ್ ಕಂಬಳ, ಪತ್ರಿಕಾ ವಿತರಕ ರಾಧಾಕೃಷ್ಣ ಜಯನಗರ, ನಾಟಿವೈದ್ಯೆ ಸರಸ್ವತಿ ಆಚಾರ್ಯ ಕಾವಿನಮೂಲೆ ಹಾಗೂ ನಿರಂತರ ಗ್ರಾಮ ಸ್ವಚ್ಚತೆಗೆ ಶ್ರಮದಾನ ನಡೆಸುತ್ತಿರುವ ಶ್ರೀ ಮಹಾತ್ಮಗಾಂಧಿ ಸೇವಾ ಸಂಘ ಮಡಪ್ಪಾಡಿ ತಂಡವನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದವರು ತಿಳಿಸಿದ್ದಾರೆ.