ಚಾಕಲೇಟು ಉದ್ಯಮದಲ್ಲಿ ಪ್ರಸಿದ್ಧವಾಗಿರುವ ಕ್ಯಾಂಪ್ಕೋ ಸಂಸ್ಥೆ, ನಿನ್ನೆ ಕೇಂದ್ರ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನದಲ್ಲಿ, ಹೊಸ ಯೋಜನೆಗಳನ್ನು ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ತಿಳಿಸಿದರು.
ಈಗಿರುವ ಚಾಕಲೇಟು ಫ್ಯಾಕ್ಟರಿಯ ಮಾದರಿಯಲ್ಲಿ ಕೊಬ್ಬರಿ ಫ್ಯಾಕ್ಟರಿಯನ್ನು ಪ್ರಾರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಫ್ಯಾಕ್ಟರಿಯಲ್ಲಿ ತೆಂಗಿನ ಚಾಕಲೇಟು, ತೆಂಗಿನ ಹಾಲು, ತೆಂಗಿನ ಹುಡಿ ಸೇರಿದಂತೆ ವಿವಿಧ ಉತ್ಪನ್ನಗಳು ತಯಾರಾಗಲಿವೆಯಂತೆ.
ಜೊತೆಗೆ ಇದೀಗ ವಿವಿಧೆಡೆ ಹಲಸಿನ ಮೇಳಗಳು ಆರಂಭವಾಗಿದ್ದು ಎಲ್ಲೆಡ ಭಾರಿ ಜನಮನ್ನಣೆ ಗಳಿಸುತ್ತಿದೆ. ಹಣ್ಣಿಗೆ ಎಲ್ಲಡೆ ಬೇಡಿಕೆ ಬರುತ್ತಿರುವುದರಿಂದ, ಹಲಸಿನ ಹಣ್ಣಿನಿಂದ ಚಾಕಲೆಟ್ ತಯಾರಿಸುವ ಬಗ್ಗೆ ಕ್ಯಾಂಪ್ಕೋ ಚಿಂತನೆ ನಡೆಸುತ್ತಿದೆ.
ಪಕ್ಕದ ರಾಜ್ಯ ಕೇರಳವು ಹಲಸನ್ನು ರಾಜ್ಯ ಫಲವನ್ನಾಗಿ ಘೋಷಣೆ ಮಾಡಿ, ಹಲಸಿನಿಂದ ಲಾಭಾದಾಯಕ ಉದ್ಯಮವನ್ನು ನಡೆಸುತ್ತಿದೆ. ಹೀಗಿರುವಾಗ ಕ್ಯಾಂಪ್ಕೋ ತೆಗೆದುಕೊಂಡಿರುವ ಈ ನಿರ್ಧಾರದಿಂದ ಕರಾವಳಿ ಭಾಗದ ಹಲಸಿಗೆ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ.