Recent Posts

Monday, January 20, 2025
ಸುದ್ದಿ

ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದರು: ನಳೀನ್ ಕುಮಾರ್

 

Highlights :

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍ ಕೊಲೆ ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಬಶೀರ್‍ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ :  ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍ ಕೊಲೆ ಹೇಯ ಕೃತ್ಯವನ್ನು ಖಂಡಿಸುತ್ತೇನೆ.  ಬಶೀರ್‍ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಬಶೀರ್‍ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು.  ರಾಜ್ಯದಲ್ಲಿ ಗೂಂಡಾಗಿರಿ ಮತ್ತೊಮ್ಮೆ ತಾಂಡವವಾಡುತ್ತಿದೆ.  ದರೋಡೆಕೋರರು ಸಕ್ರೀಯರಾಗಿದ್ದರೆ  ಮತಾಂಧ  ಶಕ್ತಿಗಳು ಎಚ್ಚೆತ್ತುಕೊಂಡಿವೆ.  ಕಾನೂನು ಸುವ್ಯವಸ್ಥೆ  ವೈಫಲ್ಯವೇ  ಕಾರಣ. ಮುಖ್ಯಮಂತ್ರಿಗಳ ದುರಂಹಕಾರ ಆಡಳಿತ, ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದೇ ಇರುವುದೇ ಇವೆಲ್ಲಕ್ಕೂ ಕಾರಣ ಎಂದು ನಳೀನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ  ರಾಜಿನಾಮೆ ಕೊಡುತ್ತಿದ್ದರು.  ನಮಗೆ ಸರ್ಕಾರದ ಮೇಲೆ ನಿರೀಕ್ಷೆ ಇಲ್ಲ.  ರಮಾನಾಥ ರೈಗೆ ಸೋಲಿನ ಭಯ ಕಾಡಿದೆ.  ಭಯದ ಪರಿಣಾಮ ಮತಬ್ಯಾ‍ಂಕ್ ಮಾಡುತ್ತಿದ್ದಾರೆ.  ಸಿಎಂಗೆ ಕಿವಿ ಚುಚ್ಚುವ ಕೆಲಸ ಇಂದು ಮಾಡಿದ್ದಾರೆ.  ರಮಾನಾಥ ರೈ ಬಾಯಿಗೆ ಬಂದಾಗೆ ಹೇಳುವುದು ನೋಡಿದ್ರೆ ಅವರ ರಾಜಕೀಯ ಅನುಭವ ಪರೀಕ್ಷೆ ಮಾಡಬೇಕು.  ಸಿಎಂ ಹೋದಲ್ಲಿ ಬಲಿದಾನವಾಗುತ್ತಿದೆ ಎಂದರೆ ಸಿಎಂ ಪ್ರವಾಸ ಎಂಥದ್ದು ಯೋಚನೆ ಮಾಡಬೇಕು ಎಂದು  ಸಂಸದ ನಳೀನ್ ಕುಮಾರ್‍ ಕಟೀಲ್  ಉಡುಪಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

Leave a Response