Recent Posts

Monday, January 20, 2025
ಸುದ್ದಿ

ಕೈ ಕೈ ಮಿಲಾಯಿಸಿದ ಖೈದಿಗಳು | ಮಂಗಳೂರು ಜೈಲಿನಲ್ಲಿ ಹೊಡೆದಾಟ – 5 ಜನರಿಗೆ ಗಂಭೀರ ಗಾಯ

 

ಮಂಗಳೂರು : ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಸ್ತುತ ನಡೆಯುತ್ತಿದ್ದ ಘರ್ಷಣೆಗಳು ಅಶಾಂತಿಯ ವಾತಾವರಣವನ್ನು ಮಂಗಳೂರಿನ ಜೈಲಿನ ಒಳಗಡೆಯೂ ನಿರ್ಮಾಣ ಮಾಡಿದೆ. ಮಂಗಳೂರು ಜೈಲಿನೊಳಗೆ ಎರಡು ಗುಂಪಿನ ಖೈದಿಗಳು ಪರಸ್ಪರ ಹೊಡೆದಾಡಿ ಕೊಂಡ ಪ್ರಕರಣ ಇಂದು ಸಂಜೆ ನಡೆದಿದೆ. 5 ಜನ ಖೈದಿಗಳಿಗೆ ಗಂಭೀರ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಖೈದಿಗಳು ದಾಳಿ ನಡೆಸಿದ್ದಾರೆ.ಒಬ್ಬ ಪೊಲೀಸ್ ಸಿಬ್ಬಂದಿಯ ಕೈಯನ್ನು ಖೈದಿಗಳು ಮುರಿದಿದ್ದು 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.ರಾಡ್ ,ಅಲ್ಯೂಮಿನಿಯಂ ಫ್ರೇಮ್,ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ.
ಜೈಲ್ ನೊಳಗೆ ಡಿಸಿಪಿ ಹನುಮಂತರಾಯ ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ್ , ಇನ್ಸ್ ಪೆಕ್ಟರ್ ರವೀಶ್ ನಾಯಕ್ ಸೇರಿದಂತೆ ಹಿರಿಯ ಅಧಿಕಾರಗಳು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನೂರಕ್ಕೂ ಹೆಚ್ಚು ಪೊಲೀಸರು ಜೈಲಿನೊಳಗೆ ಲಾಠಿ ಚಾರ್ಜ್ ನಡೆಸಿ ಹೊಡೆದಾಟವನ್ನು ತಹಬದಿಗೆ ತಂದರು.
ಘರ್ಷಣೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response