ಮಂಗಳೂರು : ಎಸಿಪಿ ಸೆಂಟ್ರಲ್ ಮತ್ತು ತಂಡ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಿನ್ನೆ ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ 1 ಕೆ.ಜಿ. 200 ಗ್ರಾಂ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಎಕ್ಕೂರು ಕಲ್ಕರ್ ಮನೆ ನಿವಾಸಿ ಪೃಥ್ವಿ ಪಿ. ಕುಮಾರ್(19), ವೆಲೆನ್ಸಿಯಾದ ಕ್ಲೆವಿನ್ ಸಲ್ಡಾನಾ(21), ಅತ್ತಾವರ ಬಾಬುಗುಡ್ಡೆಯ ವಿ.ಎಸ್. ನಿಖಿಲ್ (21) ಹಾಗೂ ಮಂಗಳಾದೇವಿಯ ಸಾಗರ್ ಅಮೀನ್ (23) ಬಂಧಿತ ಆರೋಪಿಗಳು.
ಆರೋಪಿಗಳಿಂದ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.