Tuesday, January 21, 2025
ಸುದ್ದಿ

ಫಿಲೋಮಿನಾದಲ್ಲಿ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಪ್ರಸ್ತುತ ಕಂಪೆನಿ ಸೆಕ್ರೆಟರಿ ಕೋರ್ಸುಗಳು ಬಹಳಷ್ಟು ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದೊಂದಿಗೆ ಮುಂದಿನ ಬದುಕಿಗೆ ಪೂರಕವಾಗಿರುವ ಇನ್ನಿತರ ಕೋರ್ಸುಗಳನ್ನೂ ಸಂಪಾದಿಸಿಕೊಳ್ಳಬೇಕು ಎಂದು ಐಸಿಎಸ್‍ಐ ಇದರ ಮಂಗಳೂರು ಚಾಪ್ಟರ್‍ ನ ಕೌನ್ಸಿಲರ್ ಸಿಎಸ್. ಸಂತೋಷ್ ಪ್ರಭು ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗದಿಂದ ಆಯೋಜಿಸಲ್ಪಟ್ಟ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ಮಾತನಾಡಿದರು. ಇತ್ತೀಚಿಗಿನ ದಿನಗಳಲ್ಲಿ ಸಿಎಸ್ ಕೋರ್ಸು ಕೂಡಾ ಎಂಬಿಎ, ಸಿಎ ಕೋರ್ಸಿನಂತೆ ಜನಪ್ರಿಯತೆಯನ್ನು ಪಡೆದಿದೆ. ವಿದ್ಯಾರ್ಥಿಗಳು ಅತಿ ಕಡಿಮೆ ವೆಚ್ಚದಲ್ಲಿ ಈ ಶಿಕ್ಷಣವನ್ನು ಪಡೆಯಬಹುದು. ಈ ಶಿಕ್ಷಣವನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ಮತ್ತು ಅರ್ಪಣಾ ಮನೋಭಾವ ಹೊಂದಿರಬೇಕು. ಈ ಕೋರ್ಸನ್ನು ಮಾಡಿದವರಿಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವಕಾಶವಿದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಸರಿಯಾದ ಜ್ಞಾನವಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಎಲ್ಲರಿಗಿಂತ ಭಿನ್ನವಾಗಿ ನೀವು ಏನನ್ನು ಮಾಡುತ್ತಿರೋ, ಅದು ಬದುಕಿನ ಯಶಸ್ಸಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ನಿರ್ಧರಿಸಿಕೊಳ್ಳಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ವಿ, ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಸಂಯೋಜಕ ಪ್ರಶಾಂತ್ ರೈ, ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅಧ್ಯಕ್ಷೆ ತೃತೀಯ ಬಿಬಿಎ ವಿದ್ಯಾರ್ಥಿನಿ ಫಾತಿಮತ್ ಫೈಜ್ಹಾ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪುಷ್ಪಾ ಎನ್, ಅಭಿಷೇಕ್ ಸುವರ್ಣ, ಹರ್ಷಿತ್ ಆರ್ ಸಹಕರಿಸಿದರು.

ಸಿಂಚನ ಎಮ್ ಮತ್ತು ವಿಭಾ ರೈ ಪ್ರಾರ್ಥಿಸಿದರು. ಡೊಮ್ನಿಕ್ ಸೆವಿಯೋ ಫಿಲಿಪ್ ಸ್ವಾಗತಿಸಿ, ದೇಚಮ್ಮ ಬಿ ಬಿ ವಂದಿಸಿದರು, ಶಮಂತ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.