ಬೆಳ್ತಂಗಡಿ: ಇಂದು ಬೆಳಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದನ ಕಳ್ಳಸಾಗಟನೆಯ ವಾಹನವನ್ನು ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಪೋಲಿಸರು ಜಪ್ತಿ ಮಾಡಿರುತ್ತಾರೆ.
ಈ ವಾಹನದಲ್ಲಿ 17 ಎಮ್ಮೆಗಳು ಮತ್ತು ಕೋಣಗಳು ಪತ್ತೆಯಾಗಿರುತ್ತದೆ. ಈ ವಾಹನವು ಮಹಾರಾಷ್ಟ್ರ ಗಡಿ ವ್ಯಾಪ್ತಿಯಿಂದ ಬೆಳ್ತಂಗಡಿಯ ಪೋಟ್ಟು ಕೆರೆ ಖಾಸಾಯಿ ಕಾನೆಗೆ ದನಗಳನ್ನು ಸಾಗಿಸುತ್ತಿರುವುದೆಂದು ಮಾಹಿತಿ ಲಭ್ಯವಾಗಿವೆ.
ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು ಆತ ಗುರುವಾನೆಕೆರೆಯ ಅಮೀರ್ ಹುಸೈನ್ ಎಂದು ತಿಳಿದು ಬಂದಿರುತ್ತದೆ.
ಇನ್ನೂ ಕೂಡ ದನಕಳ್ಳ ಸಾಗಟನೆಕಾರರು ಸಕ್ರಿಯವಾಗಿರುವುದು ಮತ್ತು ಒಂದು ಸಮಾಜ ಈ ಕಳ್ಳರಿಗೇ ಬೆಂಬಲವಾಗಿ ನಿಂತಿರುವುದನ್ನು ತಾಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಮತ್ತು ದನ ಹಿಡಿಯಲು ಸಹಕರಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತದೆ.