Monday, January 20, 2025
ಸುದ್ದಿ

ಉತ್ತರ ಪ್ರದೇಶ, ಅಸ್ಸಾಂನಲ್ಲಿ ಜಲಪ್ರಳಯ – ಕಹಳೆ ನ್ಯೂಸ್

ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶ ಮತ್ತು ಅಸ್ಸಾಂ ತತ್ತರಿಸಿವೆ. ಈ ಎರಡೂ ರಾಜ್ಯಗಳಲ್ಲಿ ಜಲಪ್ರಳಯದಿಂದ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಒಟ್ಟು 36 ಗ್ರಾಮಗಳು ಜಲಾವೃತವಾಗಿದ್ದು, ಲಕ್ಷಾಂತರ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ 14 ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆಯ ರೌದ್ರಾವತಾರಕ್ಕೆ ಕಳೆದ ಮೂರು ದಿನಗಳಿಂದ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 23 ಜಾನುವಾರುಗಳು ಮೃತಪಟ್ಟಿವೆ, 133 ಕಟ್ಟಡಗಳು ಕುಸಿದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉನ್ನಾವೋ, ಅಂಬೇಡ್ಕರ್ ನಗರ್, ಪ್ರಯಾಗ್‍ರಾಜ್, ಬಾರಾಬಂಕಿ, ಹರ್ದೋಯಿ, ಖಿರಿ, ಗೋರಖ್‍ಪುರ್, ಕಾನ್ಪುರ ನಗರ್, ಪಿಲಿಭಿಟ್, ಸೋನಾಬಧ್ರಾ, ಚಾಂದೋಲಿ, ಫಿರೋಜಾಬಾದ್, ಮಾವು ಮತ್ತು ಸುಲ್ತಾನ್‍ಪುರ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಾವು, ನೋವು ಸಂಭವಿಸಿದೆ. ಇದರಿಂದ ಲಕ್ಷಾಂತರ ಜನರ ತೀವ್ರ ಸಂತ್ರಸ್ಥರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕೃತಿ ವಿಕೋಪದಲ್ಲಿ ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದ್ದು, ಸಂತ್ರಸ್ಥರಿಗೆ ಬೇಕಾದ ಎಲ್ಲಾ ನೆರವನ್ನು ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬ್ರಹ್ಮಪುತ್ರ ಸೇರಿದಂತೆ ಐದು ನದಿಗಳು ಅಪಾಯದ ಮಟ್ಟ ಮೀರಿ ಭೋರ್ಗರೆಯುತ್ತಿದೆ. ಇದರಿಂದ ನೂರಾರು ಹಳ್ಳಿಗಳು ಜಲಾವೃತಗೊಂಡಿದೆ. ಪ್ರವಾಹದ ನೀರು ಜಮೀನು ಮತ್ತು ಹೊಲ, ಗದ್ದೆಗಳಿಗೆ ನುಗ್ಗಿ, 27,000 ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ಹಾನಿಯಾಗಿದೆ. ತಗ್ಗು ಪ್ರದೇಶಗಳಿಂದ 8,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಸಂತ್ರಸ್ಥರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ.

ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶ ಗಡಿ ಭಾಗದಲ್ಲಿ ಮಳೆಯಿಂದ ಭೂಕುಸಿತಕ್ಕೆ, ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತರಾಖಂಡ, ಪೂರ್ವ ಉತ್ತರ ಪ್ರದೇಶ, ಜಾಖರ್ಂಡ್, ಮಧ್ಯ ಮಹಾರಾಷ್ಟ್ರ ಕೊಂಕಣ್, ಗೋವಾ, ಕರಾವಳಿ ಕರ್ನಾಟಕ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.