Recent Posts

Monday, January 20, 2025
ಸುದ್ದಿ

ಬೆಂಗಳೂರಿಗೆ ಅಮಿತ್ ಶಾ ಆಗಮನ | ಕಾಂಗ್ರೆಸ್ ನ ಪ್ರಭಾವಿ ನಾಯಕ, ಹಾಲಿ ಮಂತ್ರಿ ಬಿ.ಜೆ.ಪಿ. ಸೇರ್ಪಡೆ ಬಹುತೇಕ ಖಚಿತ

 

Highlights : ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಮಂಗಳವಾರ ಸಂಜೆ 4.45 ಕ್ಕೆ ಬೆಂಗಳೂರಿಗೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಆಗಮಿಸಲಿದ್ದು, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್’ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಹಾಗೂ ಹಾಲಿ ಸಚಿವ ಕಾಂಗ್ರೆಸ್ ಮುಖಂಡರೊಬ್ಬರು ಬಿ.ಜೆ.ಪಿ. ಸೇರುವುದು ಬುಹುತೇಕ ಖಚಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು : ಮಂಗಳವಾರ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಾಳೆ ಸಂಜೆ 4.45 ಕ್ಕೆ ಬೆಂಗಳೂರಿಗೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಆಗಮಿಸಲಿದ್ದು, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್’ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 5.30 ರಿಂದ ಬಿಜೆಪಿ ನಾಯಕರ  ಸಭೆಯಲ್ಲಿ ಭಾಗಿಯಾಗಲಿದ್ದು  ತಡರಾತ್ರಿ 10.30 ರವರೆಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಕಾಂಗ್ರಸ್ಸಿನ ಪ್ರಭಾವಿ ನಾಯಕ ಹಾಲಿ ಸಚಿವರೊಬ್ಬರು ಬಿ.ಜೆ.ಪಿ ಸೇರ್ಪಡೆ ಕುರಿತು ಗಂಭೀರ ಚರ್ಚೆ ನಡೆಸಲಿದ್ದಾರೆ.  ಸಭೆ ಬಳಿಕ ನಾಳೆ ರಾತ್ರಿ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ 10 ರಂದು ಚಿತ್ರದುರ್ಗಕ್ಕೆ ತೆರಳಲಿದ್ದಾರೆ. ಹೊಳಲ್ಕೆರೆಯ ಬಿಜೆಪಿ  ಪರಿವರ್ತನಾ  ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಮಾವೇಶದ ಬಳಿಕ ಹೊಳಲ್ಕೆರೆ ಅತಿಥಿಗೃಹದಲ್ಲಿ ಅರ್ಧ ಗಂಟೆ ಕಾಲ ವಿಶ್ರಾಂತಿ ಪಡೆದು ಮದ್ಯಾಹ್ನ 2.30 ಕ್ಕೆ ಹೊಳಲ್ಕೆರೆಯಿಂದ ಹೆಲಿಕಾಫ್ಟರ್ ಮೂಲಕ ಕೆಂಪೇಗೌಡ ಏರ್ ಪೋರ್ಟ್’ಗೆ ಪ್ರಯಾಣ ಬೆಳೆಸಲಿದ್ದಾರೆ.  ಸಂಜೆ 5.30  ಕ್ಕೆ  ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.

Leave a Response