Monday, January 20, 2025
ಸುದ್ದಿ

ಮಾನವೀಯತೆ ಮೆರೆದ ಉಪ್ಪಿನಂಗಡಿ ಹೋಂಗಾರ್ಡ್ – ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿ ಘಟಕದ ಪ್ರವಾಹರಕ್ಷಣಾ ಗೃಹರಕ್ಷಕ ಸಮದ್, ತಮ್ಮ ಕರ್ತವ್ಯ ಮುಗಿಸಿ ತೆರಳುತ್ತಿದ್ದಾಗ, ರಥ ಬೀದಿ ರಸ್ತೆಯಲ್ಲಿ 70ರ ಹರೆಯದ ವಯೋವೃದ್ಧರೊಬ್ಬರು ಕಣ್ಣೀರು ಹಾಕುತ್ತಾ ನಿಂತಿದ್ರು.

ಇದನ್ನು ಗಮನಿಸಿದ ಸಮದ್, ವಯೋವೃದ್ಧರನ್ನು ವಿಚಾರಿಸಿದಾಗ ನನ್ನ ಹೆಸರು ರಮೂಲ. ಪುತ್ತೂರು ತಾಲೂಕಿನ ನರಿಮೂಗರು ಗ್ರಾಮದ ಕೂಡಿನೀರಿನಲ್ಲಿ ನನ್ನ ಮನೆ, ನನ್ನ ದ್ವಿಚಕ್ರ ವಾಹನ ಕಳವಾಗಿದೆ ಎಂದು ಹೇಳಿದರು. ಗೃಹರಕ್ಷಕ ತನ್ನ ಸ್ನೇಹಿತರೊಂದುಗೂಡಿ, ರಮೂಲರನ್ನು ಕರೆದುಕೊಂಡು ಪೇಟೆಯಲ್ಲಿ ಬೈಕನ್ನು ಹುಡುಕಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಯಸ್ಸಾದ ಕಾರಣ ಬೈಕ್ ಎಲ್ಲಿ ನಿಲ್ಲಿಸಿದೆ ಎಂದು ರಮೂಲರಿಗೆ ಮರೆತು ಹೋಗಿತ್ತು. ಉಪ್ಪಿನಂಗಡಿ ಪೇಟೆ ಇಡೀ ಹುಡುಕಾಡಿದಾಗ ಇಂದ್ರಪ್ರಸ್ಥ ಶಾಲೆಯ ಬಳಿ ದ್ವಿಚಕ್ರ ವಾಹನ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಮಗೆ ವಯಸ್ಸಾದ ಕಾರಣ, ಮರೆವು ಇರುವುದರಿಂದ ಇನ್ನು ಮುಂದೆ ತಾವು ದ್ವಿಚಕ್ರ ವಾಹನದಲ್ಲಿ ತೆರಳುವುದು ಕಷ್ಟಕರ. ಆದ್ದರಿಂದ ಇನ್ನು ಮುಂದೆ ಬಸ್ಸಿನಲ್ಲಿ ಪ್ರಯಾಣಿಸುವಂತೆ ರಮೂಲರಿಗೆ ಗೃಹರಕ್ಷಕ ತಿಳಿ ಹೇಳಿದರು. ಬೈಕ್ ಸಿಕ್ಕು ನೆಮ್ಮದಿಯ ನಿಟ್ಟುಸಿರು ಬಿಟ್ಟ, ವಯೋವೃದ್ದರು ಗೃಹರಕ್ಷಕ ಸಿಬಂದ್ದಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು.