Tuesday, January 21, 2025
ಸುದ್ದಿ

ಶೆಡ್‍ನಲ್ಲಿ ಅಕ್ರಮ ಜಾನುವಾರುಗಳ ವಧೆ: ಪೊಲೀಸರಿಂದ ದಾಳಿ – ಕಹಳೆ ನ್ಯೂಸ್

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಮರ್ದೊಟ್ಟು ಹೊಸಮನೆ ಎಂಬಲ್ಲಿಯ ಹನೀಫ್ ಎಂಬವರ ಅಡಿಕೆ ತೋಟದಲ್ಲಿರುವ ಶೆಡ್‍ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿಯಂತೆ ವೇಣೂರು ಪೊಲೀಸ್ ಠಾಣಾ ಉಪ ನಿರೀಕ್ಷರರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸ್ಥಳದಲ್ಲಿದ್ದ ಸುಮಾರು 20 ಕೆ.ಜಿ ದನದ ಮಾಂಸ, ಮಾಂಸ ಮಾಡದೇ ಉಳಿದಿದ್ದ ಸುಮಾರು 80 ಕೆ.ಜಿ ತೂಕದ ಜಾನುವಾರಿನ ಕಳೆಬರ, ಮತ್ತು ಮಾಂಸ ಸಾಗಾಟ ಮಾಡಲು ಬಳಸಿದ ಕೆಎ 21 ಪಿ 8278 ನೇ ಮಹೀಂದ್ರಾ ಜೀತೋ ವಾಹನ, ಮತ್ತು ಜಾನುವಾರು ವಧೆ ಮಾಡಲು ಬಳಸಿದ ಮರದ ಹಿಡಿಯಿರುವ 2 ಮಂಡೆಕತ್ತಿ, ಮರದ ಹಿಡಿ ಇರುವ 2 ಕಬ್ಬಿಣದ ಚೂರಿಗಳು, 2 ಪ್ಲಾಸ್ಟಿಕ್ ಬುಟ್ಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾಧೀನಪಡಿಸಿಕೊಂಡ ಮಾಂಸದ ಬೆಲೆ ಸುಮಾರು 10,000 ರೂ. ಅಲ್ಲದೇ ವಾಹನದ ಬೆಲೆ 2 ಲಕ್ಷ ಆಗಿದೆ. ಆರೋಪಿ ಹಸೈನಾರ್ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಇತರ 4 ಜನರು ಓಡಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ ನಂಬ್ರ 60/2019 ಕಲಂ 4 5, 8, 11, ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಪರಿರಕ್ಷಣಾ ಕಾಯ್ದೆ 1964 ರಂತೆ ಪ್ರಕರಣ ದಾಖಲುಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು